ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಮುಂದಿನವಾರ ಸಂಜಯ್‌ದತ್ ತೀರ್ಪು
webdunia
ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಅತ್ಯಂತ ಕುತೂಹಲದ ಹಂತದಲ್ಲಿ ಮುಂಬೈ ಟಾಡಾ ವಿಶೇಷ ನ್ಯಾಯಾಲಯವು ಬಾಲಿವುಡ್ ನಟ ಸಂಜಯ್‌ದತ್ ಅವರ ತೀರ್ಪನ್ನು ಮುಂದಿನ ವಾರಕ್ಕೆ ಮುಂದೂಡಿದೆ.

ಗರುವಾರದಂದು ಟಾಡಾ ನ್ಯಾಯಾಲಯದೆದುರು ಹಸನ್ಮುಖನಾಗಿ ಕಾಣಿಸಿಕೊಂಡ ಸಂಜಯ್‌ದತ್ ಗೆಲುವಿನಿಂದ ಕೂಡಿದ ಮನಃಸ್ಥಿತಿಯಲ್ಲಿದ್ದು, ತೀರ್ಪು ಯಾವ ವಿಧದಲ್ಲಿದ್ದರೂ ಸ್ವೀಕರಿಸಲು ಮಾನಸಿಕವಾಗಿ ಸಜ್ಜಾಗಿದ್ದಂತೆ ಕಂಡು ಬಂತು.

ತನ್ಮಧ್ಯೆ, ಮುಂಬೈ ಸರಣಿ ಬಾಂಬ್‌ ಸ್ಫೋಟ ಪ್ರಕರಣದ ವಿಚಾರಣೆ ನಡೆಸುತ್ತಿರುವ ವಿಶೇಷ ಟಾಡಾ ನ್ಯಾಯಾಲಯವು ಇಂದು ಆರೋಪಿ ಸಲೀಂ ಶೇಕ್‌ ಎಂಬಾತನಿಗೆ ಜೀವಾವಧಿ ಶಿಕ್ಷೆ ನೀಡಿ ತೀರ್ಪಿತ್ತಿದೆ.

ಸಲೀಂ ಕುರಿತಾದ ಆರೋಪವೆಂದರೆ 1993ರಲ್ಲಿ ಮುಂಬೈಯಲ್ಲಿ ಸಂಭವಿಸಿದ ಸರಣಿ ಸ್ಫೋಟದ ವೇಳೆ ಮಾಹಿಂ ನಲ್ಲಿರುವ ಮೀನುಗಾರರ ಕಾಲೋನಿಯಲ್ಲಿ ಬಾಂಬ್ ಎಸೆದು ಆಸ್ತಿ-ಜೀವ ಹಾನಿಗೆ ಕಾರಣವಾಗಿರುವುದಾಗಿ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿತ್ತು.

ಪ್ರಕರಣವನ್ನು ವಿಚಾರಿಸಿದ ನ್ಯಾಯಾಲಯವು ಆತನಿಗೆ ಜೀವಾವವಧಿ ಶಿಕ್ಷೆ ವಿಧಿಸಿದೆ. ಟಾಡಾ ನ್ಯಾಯಾಲಯದಲ್ಲಿ ಇತರ ಆರೋಪಿಗಳ ವಿಚಾರಣೆ ಪ್ರಗತಿಯಲ್ಲಿದೆ.
ಮತ್ತಷ್ಟು
ವಿಮಾನ ಸಿಬ್ಬಂದಿ ಮುಷ್ಕರ ಅಂತ್ಯ
ಮುಂಬೈಸ್ಫೋಟ- ಸಲೀಂಗೆ ಜೀವಾವಧಿ ಶಿಕ್ಷೆ
ಡಿಎಂಕೆ-ಎಡರಂಗ ಮಾತುಕತೆ ಅನಿಶ್ಚಿತ
ದೆಹಲಿ, ಕರ್ನಾಟಕಗಳಲ್ಲೂ ಕೇರಳದ ಗುನ್ಯಾ
ಮಿಂಚು- ಮಕ್ಕಳೂ ಸೇರಿ 10 ಬಲಿ
ಕಾನೂನುಬಾಹಿರ ಹೈಕೋ- ಮುಂದುವರಿದ ಸಂಪು