ಶ್ರೀಗರದ ಮುಸ್ಲೀಮರು ಇಂದು ಬೃಹತ್ ಪ್ರತಿಭಟನೆ ನಡೆಸಿ ಅಮೇರಿಕಾ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಅವರ ಪ್ರತಿಕೃತಿ ದಹನ ಮಾಡಿದರು.
ಇರಾಕಿನಲ್ಲಿ ಅಮೇರಿಕಾ ನೇತೃತ್ವದ ಶಾಂತಿಪಾಲನಾ ಪಡೆ ಅಲ್ಲಿನ ಸ್ವರ್ಣ ಮಸೀದಿಗೆ ಬಾಂಬ್ ದಾಳಿಯಲ್ಲಿ ಹಾನಿ ಮಾಡಿದ ಪ್ರಕರಣದಿಂದ ರೊಚ್ಚಿಗೆದ್ದ ಶ್ರೀನಗರದ ಮುಸಲ್ಮಾನರು ಪ್ರಸ್ತುತ ಪ್ರತಿಭಟನೆ ನಡೆಸಿದ್ದಾರೆ.
ಬುಧವಾರದಂದು ಇರಾಖಿನ ಅಸ್ಕಾರಿಯಾ ಶೀಟ್ ಸಂಕೀರ್ಣಕ್ಕೆ ಧಕ್ಕೆಯಾದಾಗ ಮಸೀದಿಗೂ ಭಾಗಿಕ ಹಾನಿಯಾಗಿತ್ತು. ಇರಾಖಿನಲ್ಲಿರುವ ಯಾದವೀ ಕಲಹ ಹಾಗೂ ಉಗ್ರಗಾಮಿ ಚಟುವಟಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಅಮೇರಿಕಾ ನೇತೃತ್ವದ ಮಿತ್ರ ಸೇನೆ ಕಾರ್ಯಾಚರಣೆ ನಡೆಸುತ್ತಿದೆ.
|