ಯುಪಿಎ ಸರ್ಕಾರದ ಪರವಾಗಿ ಕಾಂಗ್ರೆಸ್ ಪಕ್ಷವು ಹೆಸರಿಸಿದ ಮೂವರು ಅಭ್ಯರ್ಥಿಗಳನ್ನು ಎಡರಂಗ ಕೂಟ ನಿರಸ್ಕರಿಸಿರುವುದರಿಂದ ರಾಜಸ್ತಾನದ ರಾಜ್ಯಪಾಲರಾದ ಪ್ರತಿಭಾ ಟೀಲ್ ಅಭ್ಯರ್ಥಿಯಾಗಿ ಆಯ್ಕೆಯಾಗಿದೆ.
ಪ್ರತಿಭಾ ಪಾಟೀಲ್ ರಾಷ್ಟ್ರಪತಿಯಾಗಿ ಆಯ್ಕೆಯಾದರೆ ಭಾರತಕ್ಕೆ ಪ್ರಥಮ 'ಮಹಿಳಾ ರಾಷ್ಟ್ರಪತಿ' ಎಂಬ ಖ್ಯಾತಿಗೆ ಪಾತ್ರರಾಗುವ ನಿರೀಕ್ಷೆ ಇದೆ. ಇದಕ್ಕೂ ಮುನ್ನ ಹಿರಿಯ ಗಾಂಧಿವಾದಿ ನಿರ್ಮಲಾ ದೇಶಪಾಂಡೆ ಇವರ ಹೆಸರನ್ನೂ ಸೂಚಿಸಲಾಗಿತ್ತಾದರೂ ಅಂತಿಮವಾಗಿ ಪ್ರತಿಭಾ ಆಯ್ಕೆಯಾದರು.
ಪ್ರತಿಭಾ ಅವರು 72ರ ಹರೆಯದವರಾಗಿದ್ದು ಈ ಮೊದಲು ರಾಜ್ಯ ಸಭೆಯ ಉಪಾಧ್ಯಕ್ಷರಾಗಿದ್ದರು, ಇವರು ಮೂಲತಋ ಮಹಾರಾಷ್ಟ್ರದವರಾಗಿದ್ದಾರೆ. ಸ್ನಾತರಕೋತ್ತರ ಪದವೀಧರೆಯಾಗಿರುವ ಈಕೆ ತಮ್ಮ ರಾಜಕೀಯ ಪ್ರವೇಶ ಹಂತದ ಪೂರ್ವದಲ್ಲಿ ವಿನೋಬಾ ಭಾವೆ ಅವರ ಭೂದಾನ ಯಜ್ಞದಲ್ಲಿ ಪಾಲ್ಗೊಂಡವರಾಗಿದ್ದಾರೆ.
ಕಳೆದ ಅವಧಿಗೆ ಡಾ. ಅಬ್ದುಲ್ ಕಲಾಂ ಅವರ ವಿರುದ್ಧ ಎನ್‌ಡಿಎ ಸರ್ಕಾರ ಲಕ್ಷ್ಮೀ ಸೆಹಗಲ್ ಅವರನ್ನು ಕಣಕ್ಕಿಳಿಸುವ ನಿರ್ಧಾರ ಸ್ವೀಕರಿಸಿತ್ತಾದರೂ ಕೊನೆಗೆ ಕಲಾಂ ಸರ್ವಸಮ್ನತ ಅಭ್ಯರ್ಥಿಯಾಗಿದ್ದರಿಂದ 'ಮಹಿಳಾ' ಅವಕಾಶ ಇಲ್ಲವಾಗಿತ್ತು. ಈ ಬಾರಿ ಆದರೆ ಬಿಜೆಪಿ , ತೃತೀಯ ರಂಗದ ಸಾಧ್ಯತೆಗಳೂ ಇವೆ.
ತಮಿಳ್ನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಇವರ ನೇತೃತ್ವದಲ್ಲಿ ಇಂದು ಎರಡನೇ ಬಾರಿ ಸಭೆ ಸೇರಿದರೂ ಎಡಪಂಥೀಯ ಸಂಘಟನೆಗಳು ಒಮ್ಮತದ ಅಭ್ಯರ್ಥಿಯನ್ನಾರಿಸಲು ವಿಫಲವಾದವು.
ಕಾಂಗ್ರೆಸ್ ಪಕ್ಷ ಹೆಸರಿಸಿದ್ದ ಪ್ರಣಬ್ ಮುಖರ್ಜಿ, ಶಿವರಾಜ್ ಪಾಟೀಲ್, ಕರಣ್ ಸಿಂಗ್ ಇವರಲ್ಲಿ ಶಿವರಾಜ್ ಮತ್ತು ಕರಣ್ ಅವರನ್ನು ಪ್ರಥಮ ಹಂತದಲ್ಲಿ ಸಭೆ ತಿರಸ್ಕರಿಸಿತು. ಆದರೆ ಪ್ರಣಬ್ ಸ್ವೀಕಾರಾರ್ಹ ಆಯ್ಕೆಯಾಗಿಲ್ಲ.
ಈ ಮಧ್ಯೆ ಎಡರಂಗದಿಂದ ಋಣಾತ್ಮಕ ಮಾಹಿತಿ ಬರುತ್ತಿದ್ದಂತೆಯೇ, ಯುಪಿಎ ವರಿಷ್ಠರಾದ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಹಾಗೂ ಸೋನಿಯಾ ಗಾಂಧಿಯವರು ಹಿರಿಯ ಗಾಂಧಿ ವಾದಿ ಪದ್ಮ ವಿಭೂಷಣ್ ನಿರ್ಮಲಾ ದೇಶಪಾಂಡೆ ಹಾಗೂ ರಾಜ್ಯಪಾಲ ಪ್ರತಿಭಾ ಪಾಟೀಲ್ ಇವರ ಹೆಸರನ್ನು ತುರ್ತಾಗಿ ಹೆಸರಿಸಲಾಗಿದೆ.
ಈ ಇಬ್ಬರು ಆಭ್ಯರ್ಥಿಗಳಲ್ಲಿ ಆಯ್ಕೆಯಾದರೆ ಮಹಿಳಾ ರಾಷ್ಟ್ರಪತಿಯಾಗಿ ಭಾರತಕ್ಕೆ ಹೊಸ ಅಕಾಶ ಲಭಿಸಬಹುದು.
|