ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಪ್ರತಿಭಾ-ಕಾಂಗ್ರೆಸ್‌ನಿಂದ 'ಹಿರಿಯರಿಗೆ' ಅವಮಾನ
webdunia
ಕಾಂಗ್ರೆಸ್‌ ಪಕ್ಷವು ಎಡರಂಗ ಪಕ್ಷಗಳ ಮಾತಿಗೆ ಮಣೆಹಾಕಿ ಕೊನೆಯ ಕ್ಷಣದಲ್ಲಿ ಪ್ರತಿಭಾ ಪಾಟೀಲ್‌ ಅವರನ್ನು ರಾಷ್ಟ್ರ ಪತಿ ಅಭ್ಯರ್ಥಿಯಾಗಿ ಆಯ್ಕೆಮಾಡಿರುವುದರಿಂದ ಹಿರಿಯ ಕಾಂಗ್ರೆಸಿಗರಿಗೆ ಪಕ್ಷ ಅವಮಾನ ಮಾಡಿದಂತಾಗಿದೆ ಎಂದು ಭಾರತೀಯ ಜನತಾ ಪಕ್ಷ ಅಭಿಪ್ರಾಯಪಟ್ಟಿದೆ.

ಪ್ರಸ್ತತ ಘೋಷಣೆಯು ಪ್ರತಿಭಾ ಪಾಟೀಲ್‌ ಅವರ ಘನತೆಯನ್ನು ಹೆಚ್ಚಿಸುವುದಿಲ್ಲ. ಆದರೆ ಹಿರಿಯ ಕಾಂಗ್ರೆಸಿಗರಾದ ಶಿವರಾಜ್‌ ಪಾಟೀಲ್‌, ಪ್ರಣಬ್‌ ಮುಖರ್ಜಿ ಹಾಗೂ ಕರಣ್‌ ಸಿಂಗ್‌ ಇವರ ಘನತೆಗೆ ಕುಂದುಂಟುಮಾಡಿದೆ. ಕಾಂಗ್ರೆಸ್‌ನಲ್ಲಿರುವ ಒಡಕನ್ನು ಬಯಲುಮಾಡಿದೆ ಎಂದು ಬಿಜೆಪಿ ತಿಳಿಸಿದೆ.

ಹಿರಿಯ ಕಾಂಗ್ರೆಸಿಗರ ಹೆಸರನ್ನು ಈ ಮೊದಲು ಕಾಂಗ್ರೆಸ್‌ ಹೈಕಮಾಂಡ್‌ ಸ್ವತಃ ಫೋಷಿಸಿತ್ತು. ಆದರೆ ಕೊನೆಯ ಕ್ಷಣಗಳಲ್ಲಿ ಯಾದಿಯಲ್ಲೇ ಇಲ್ಲದಿರುವಂತಹ ಪ್ರತಿಭಾ ಪಾಟೀಲ್‌ ಅವರ ಹೆಸರನ್ನು ಘೋಷಿಸಿರುವುದು ಪ್ರಥಮತಃ ಹೆಸರಿಸಲಾಗಿರುವ ಹಿರಿಯರ ಘನತೆಗೆ ಕುಂದುಂಟು ಮಾಡಿದೆ ಎಂಬುದು ಬಿಜೆಪಿ ಹೇಳಿಕೆ.

ಕಾಂಗ್ರೆಸ್‌ನಲ್ಲಿ ಇದರಿಂದ ಅಭಿಪ್ರಾಯ ಭಿನ್ನತೆ ಇರುವುದು ಪ್ರಕಟವಾಗಿದೆ ಎಂದು ಬಿಜೆಪಿ ತಿಳಿಸಿದೆ. ಎನ್‌ಡಿಎಯು ಹಾಲಿ ಉಪರಾಷ್ಟ್ರಪತಿ ಭೈರೋನ್‌ ಸಿಂಗ್‌ ಶೆಖಾವತ್‌ ಅವರನ್ನು ಬೆಂಬಲಿಸಲಿದೆ. ಈ ಉದ್ದೇಶಕ್ಕಾಗಿ ಆರ್‌ಎಲ್‌ಡಿ ಯ ಅಜಿತ್‌ಸಿಂಗ್ ಹಾಗೂ ಜೆಡಿಯು ಪಕ್ಷದ ಶರದ್‌ ಯಾದವ್‌ ಅವರೊಂದಿಗೆ ಮಾತುಕತೆ ನಡೆಸಲಿದೆ ಎಂದು ಬಿಜೆಪಿ ವಕ್ತಾರರು ತಿಳಿಸಿದ್ದಾರೆ.
ಮತ್ತಷ್ಟು
ಯುಪಿಎ: ಪ್ರತಿಭಾಪಾಟೀಲ್- ಪ್ರಥಮ ಮಹಿಳೆ?
ಜಾರ್ಜ್ ಬುಶ್ ಪ್ರತಿಕೃತಿ ದಹನ
ಮುಂದಿನವಾರ ಸಂಜಯ್‌ದತ್ ತೀರ್ಪು
ವಿಮಾನ ಸಿಬ್ಬಂದಿ ಮುಷ್ಕರ ಅಂತ್ಯ
ಮುಂಬೈಸ್ಫೋಟ- ಸಲೀಂಗೆ ಜೀವಾವಧಿ ಶಿಕ್ಷೆ
ಡಿಎಂಕೆ-ಎಡರಂಗ ಮಾತುಕತೆ ಅನಿಶ್ಚಿತ