ರಾಷ್ಟ್ರಪತಿ ಚುನಾವಣೆಯ ದಿನಾಂಕ ಜುಲೈ 19ರಂದು ನಿರ್ಧರಿತವಾಗಿರುವಂತೆಯೇ ಅಧಿಕೃತ ಪ್ರಕಟಣೆಯನ್ನು ಚುನಾವಣಾ ಆಯೋಗ ನಾಳೆ ಪ್ರಕಟಿಸುವ ನಿರೀಕ್ಷೆ ಇದೆ.
ರಾಷ್ಟ್ರಪತಿ ಚುನಾವಣೆಗಾಗಿ ನಾಮ ಪತ್ರ ಸಲ್ಲಿಸಲು ಜೂನ್ 30 ಕೊನೆ ದಿನವಾಗಲಿದೆ. ಸೂಕ್ಷ್ಮ ಪರಿಶೋಧನೆ ಜು.2 ಹಾಗೂ ಜುಲೈ 4 ನಾಮಪತ್ರ ವಾಪಸಾತಿಗಾಗಿ ಕೊನೆದಿನಾಂಕವಾಗಿರುತ್ತದೆ.
ಕಾಂಗ್ರೆಸ್ ನೇತೃತ್ವದ ಎಡರಂಗ ಬೆಂಬಲಿತ ಯುಪಿಎ ಒಕ್ಕೂಟದ ಸರ್ವ ಸಮ್ಮತ ಅಭ್ಯರ್ಥಿಯಾಗಿ ರಾಜಸ್ಥಾನದ ರಾಜ್ಯಪಾಲೆ ಪ್ರತಿಭಾ ಪಾಟೀಲ್ ನಿಯುಕ್ತರಾಗಿದ್ದಾರೆ. ಆದರೆ ಇತರ ಅಭ್ಯರ್ಥಿಗಳ ಹೆಸರು ಅಧಿಕೃತವಾಗಿ ಪ್ರಕಟವಾಗಿಲ್ಲ.
ಬಿಜೆಪಿ ನೇತೃತ್ವದ ಎನ್‌ಡಿಎ ಪಕ್ಷಗಳು ಹಾಲಿ ಉಪರಾಷ್ಟ್ರಪತಿ ಬೈರೋನ್‌ಸಿಂಗ್ ಶೆಖಾವತ್ ಅವರನ್ನು ಕಣಕ್ಕಿಳಿಸುವ ನಿರೀಕ್ಷೆ ಇದೆ. ಆದರೆ ನಾಮಪತ್ರ ಪಕ್ಷೇತರ ಅಭ್ಯರ್ಥಿ ಎಂಬ ನೆಲೆಯಲ್ಲಿ ಸಲ್ಲಿಕೆಯಾಗಲಿದೆ.
ಹಾಲಿ ರಾಷ್ಟ್ರ ಪತಿ ಡಾ.ಎ ಪಿ ಜೆ ಅಬ್ದುಲ್ ಕಲಾಂ ಅವರ ಅವರು ಜುಲೈ 24ಕ್ಕೆ ಕೊನೆಗೊಳ್ಳಲಿದೆ. ಇದಕ್ಕೆ ಮುನ್ನ ಜು. 21ರಂದು ಮತ ಎಣಿಕೆ, ವಿಜೇತರ ಹೆಸರು ಪ್ರಕಟವಾಗಲಿದೆ .ಚುನಾವಣೆಯು ಗೌಪ್ಯ ಪತದಾನ ವಿಧಾನದಲ್ಲಿ ಜರುಗಲಿದೆ. ಶಾಸಕರು, ಸಂಸದರು ಮತದಾನಕ್ಕೆ ಅರ್ಹರಾಗಿರುತ್ತಾರೆ.
|