ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಪ್ರಧಾನಿ ಸಿಂಗ್ ರಾಜ್ಯಸಭೆಗೆ ಪ್ರತಿಜ್ಞಾಸ್ವೀಕಾರ
webdunia
ಪ್ರಧಾನ ಮಂತ್ರಿ ಮನಮೋಹನ ಸಿಂಗ್‌ ಇಂದು ಅಸ್ಸಾಂ ರಾಜ್ಯದ ಪ್ರಾತಿನಿಧ್ಯದೊಂದಿಗೆ ರಾಜ್ಯಸಭಾಸದಸ್ಯರಾಗಿ ಪ್ರಮಾಣವಚನ ಸ್ವೀಕರಿಸಿದರು.

ಸಂಸತ್‌ ಭವನದಲ್ಲಿ ಜರುಗಿದ ಸಮಾರಂಭದ ಅಧ್ಯಕ್ಷತೆಯನ್ನು ರಾಜ್ಯಸಭಾಧ್ಯಕ್ಷ ಬೈರೋನ್‌ಸಿಂಗ್ ಶೆಕಾವತ್ ವಹಿಸಿ, ಪ್ರತಿಜ್ಞಾ ವಿಧಿ ಬೋಧಿಸಿದರು. ಮನಮೋಹನ್‌ ಸಿಂಗ್ ಇತ್ತೀಚೆಗಷ್ಟೇ ಅವಿರೋಧವಾಗಿ ನಾಲ್ಕನೇ ಬಾರಿಗೆ ಮೇಲ್ಮನೆಗೆ ಆಯ್ಕೆಯಾಗಿದ್ದರು.

ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಸಂಪುಟದ ಸದಸ್ಯರು, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಶಿವರಾಜ್‌ ಪಟೀಲ್, ಲಾಲೂಪ್ರಸಾದ್‌ ಯಾದವ್,ರಾಂ ವಿಲಾಸ್‌ ಪಾಸ್ವಾನ್, ಟಿ ಆರ್‌ ಬಾಲು, ಎಸ್‌ .ಕೆ. ಶಿಂಧೆ , ಸಂತೋಷ್‌ ಮೋಹನ್‌ ದೇವ್, ಪಿ.ಆರ್. ಡಿ ಮುನ್ಶಿ, ಹೆಚ್‌ ಆರ್ ಭಾರದ್ವಾಜ್ ಉಪಸ್ಥಿತರಿದ್ದರು.

ರಾಜ್ಯ ಸಭಾಸದಸ್ಯರಾದ ಎಸ್ ಎಸ್ ಅಹ್ಲುವಾಲಿಯಾ , ಸೀತಾರಾಂ ಯೆಚೂರಿ ಭಾಗವಹಿಸಿದ್ದರು. ಮೇ18ರಂದು ಜರುಗಿದ ಚುನಾವಣೆಯಲ್ಲಿ ಪ್ರತಿ ಸ್ಪರ್ಧಿ ಮಾತಂಗ ಸಿಂಗ್‌ ಹಿಂದೆ ಸರಿದ ಕಾರಣ ಪ್ರಧಾನಿ ಮನಮೋಹನ್ ಸಿಂಗ್ ಅವಿರೋಧ ಆಯ್ಕೆಯಾಗಿದ್ದರು.
ಮತ್ತಷ್ಟು
ರಾಷ್ಟ್ರಪತಿ ಚುನಾವಣೆ-ನಾಳೆ ಚು.ಆ. ಪ್ರಕಟಣೆ
ಮುಂಬೈ ಸ್ಫೋಟ ಆರೋಪಿ ಪಠಾಣ್ ಸಾವು
ಪ್ರತಿಭಾ-ಕಾಂಗ್ರೆಸ್‌ನಿಂದ 'ಹಿರಿಯರಿಗೆ' ಅವಮಾನ
ಯುಪಿಎ: ಪ್ರತಿಭಾಪಾಟೀಲ್- ಪ್ರಥಮ ಮಹಿಳೆ?
ಜಾರ್ಜ್ ಬುಶ್ ಪ್ರತಿಕೃತಿ ದಹನ
ಮುಂದಿನವಾರ ಸಂಜಯ್‌ದತ್ ತೀರ್ಪು