ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ)ಯ 59.7ಶೇಕಡ ಪ್ರಮಾಧ ಬೃಹತ್ ಪ್ರಮಾಣದ ಪಾಲು ಖರೀದಿಸುವ ಉದ್ದೇಶದಿಂದ ಕಾಯ್ದೆ ತಿದ್ದುಪಡಿಗಾಗಿ ಕೇಂದ್ರ ಸರ್ಕಾರವು ಸುಗ್ರೀವಾಜ್ಞೆ ಜಾರಿಗೊಳಿಸಲಿದೆ.
ಪ್ರಸ್ತುತ 59.7ಶೇಕಡ ಪಾಲು 40,000 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗುವುದು. ಇದಕ್ಕಾಗಿ ಅಡಚಣೆಯಾಗಿರುವ ಎಸ್‌ಬಿಐ ಕಾಯ್ದೆಗೆ ತಿದ್ದುಪಡಿ ತರುವ ಉದ್ದೇಶದಿಂದ ಪ್ರಸ್ತುತ ಸುಗ್ರೀವಾಜ್ಞೆ(ಆರ್ಡಿನೆನ್ಸ್) ಜಾರಿಗೊಳಿಸಲು ನಿರ್ಧರಿಸಲಾಗಿದೆ.
ಪ್ರಸ್ತುತ ಮಾಹಿತಯನ್ನು ವಾರ್ತಾಮಾಧ್ಯಮಗಳಿಗೆ ತಿಳಿಸಿದ ಮಾಹಿತಿ ಹಾಗೂ ಪ್ರಸಾರ ಖಾತೆ ಮಂತ್ರಿ ಪ್ರಿಯರಂಜನ್ ದಾಸ್ ಮುನ್ಷಿ ಪ್ರಸ್ತುತ ಲಾಭಾಂಶವನ್ನು ಸಕಾಲಿಕವಾಗಿ ಬ್ಯಾಂಕ್ ನೀಡಿದರೆ ಈ ವ್ಯವಹಾರ ಆಗಸ್ಟ್‌ನಿಂದ ಸರ್ಕಾರಕ್ಕೆ ಪ್ರಯೋಜನಪ್ರದವಾಗಲಿದೆ ಎಂದಿದ್ದಾರೆ.
ಪ್ರಸ್ತುತ ಸುಗ್ರೀವಾಜ್ಞೆಯನ್ನು ಮುಂಬರುವ ಸಂಸತ್ ಅಧಿವೇಶನದಲ್ಲಿ ಮಸೂದೆ ಮಂಡಿಸಿ ಕಾಯ್ದೆಯಾಗಿ ಪರಿವರ್ತಿಸಬಹುದಾಗಿದೆ ಎಂದವರು ತಿಳಿಸಿದರು. ಪಾಲುಖರೀದಿಗಾಗಿ ಎಸ್‌ಬಿಐಯ 1955ರಷ್ಟು ಹಳೆಯ ಕಾಯ್ದೆಗೆ ತಿದ್ದುಪಡಿ ತರಬೇಕಿದೆ.
|