ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ದೆಹಲಿಯಲ್ಲಿ ಮೈಮನಗಳಿಗೆ ತಂಪೆರದ ಮಳೆ
webdunia
ದೆಹಲಿ ಕೊನೆಗೂ ತಣ್ಣಗಾಗಿದೆ. ಇದು ಯಾವುದೋ ಉದ್ವಿಗ್ನತೆಯ ಫಾಲೋ ಅಪ್ ಅಲ್ಲ. ಸುಡುಬಿಸಿಲಿನಿಂದ ಕಾದ ಕಾವಲಿಯಾಗಿದ್ದ ದೆಹಲಿಗೆ ಇಂದು ಮಧ್ಯಾಹ್ನ ಮಳೆಯ ಸ್ನೇಹಸಿಂಚನವಾಗಿದೆ, ತಂಪೆರಚಿದೆ.

ಕಳೆದೊಂದು ವಾರದಿಂದ ಭಾರತದ ಉತ್ತರ ಹಾಗೂ ಮಧ್ಯಭಾಗದ ರಾಜ್ಯಗಳು ಬಿರುಬಿಸಿಲಿ ಝಳದಿಂದ ತತ್ತರಿಸಿದ್ದವು. ಜನತೆ ಬಿಸಿಲಿನ ತೀಕ್ಷ್ಣತೆ, ಬಿಸಿಗಾಳಿಯ ಆಘಾತದಿಂದ ಸಂಕಷ್ಟಕ್ಕೀಡಾಗಿದ್ದರು.

ಶುಕ್ರವಾರ ಅಪರಾಹ್ನದಿಂದ ಸುರಿಯುತ್ತಿರುವ ಮಳೆ ಮುಂಗಾರಿನ ಸೂಚನೆ ಎನ್ನಲಾಗುತ್ತಿದೆಯಾದರೂ ಅದಿನ್ನೂ ದೃಢಪಡಬೇಕಿದೆ. ಆದರೂ ಬಿಸಿಲಿನಿಂದ ಬೆಂಡಾದ ಜನರು ಮಳೆಯಲ್ಲಿ ನನೆದು, ಕುಣಿದು ಕುಪ್ಪಳಿಸಿದರು.

ಬಿಸಿಲಿನ ತಾಪ, ಬಿಸಿಗಾಳಿಯ ಪ್ರಕೋಪದಿಂದಾಗಿ ಇದುವರೆಗೆ 150ರಷ್ಟು ಜನರ ಜೀವಹಾನಿಯಾಗಿರುವ ಮಾಹಿತಿ ರಾಜಧಾನಿ ದೆಹಲಿ, ನೆರೆಯ ಇತರ ರಾಜ್ಯಗಳನ್ನಾಧರಿಸಿ ಸಂಭವಿಸಿದತ್ತು.
ಮತ್ತಷ್ಟು
ಎಸ್‌ಬಿಐ ಪಾಲಿಗಾಗಿ ಕೇಂದ್ರದಿಂದ ಸುಗ್ರೀವಾಜ್ಞೆ
ಹಣದುಬ್ಬರದ ಪ್ರಮಾಣ ಇಳಿಕೆ
ಪ್ರಧಾನಿ ಸಿಂಗ್ ರಾಜ್ಯಸಭೆಗೆ ಪ್ರತಿಜ್ಞಾಸ್ವೀಕಾರ
ರಾಷ್ಟ್ರಪತಿ ಚುನಾವಣೆ-ನಾಳೆ ಚು.ಆ. ಪ್ರಕಟಣೆ
ಮುಂಬೈ ಸ್ಫೋಟ ಆರೋಪಿ ಪಠಾಣ್ ಸಾವು
ಪ್ರತಿಭಾ-ಕಾಂಗ್ರೆಸ್‌ನಿಂದ 'ಹಿರಿಯರಿಗೆ' ಅವಮಾನ