ರಾಷ್ಟ್ರಪತಿ ಚುನಾವಣೆಗೆ ಯುಪಿಎ ಒಕ್ಕೂಟದ ಘೋಷಿತ ಅಭ್ಯರ್ಥಿ ಪ್ರತಿಭಾ ಪಾಟೀಲ್ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಸುವ ವಿಚಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟದಲ್ಲಿ ಭಿನ್ನಮತ ವ್ಯಕ್ತವಾಗತೊಡಗಿದೆ.
ಎನ್‌ಡಿಎ ಪಾಲುದಾರಪಕ್ಷಗಳಲ್ಲೊಂದಾಗಿರುವ ಫಾರ್ವರ್ಡ್‌ಬ್ಲಾಕ್ ಹೇಳಿಕೆ ನೀಡಿ ಪಾಟೀಲ್ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸುವುದನ್ನು ವಿರೋಧಿಸಿದೆ. ಫಾರ್‌ವರ್ಡ್ ಬ್ಲಾಕ್ ನೀಡಿರುವ ಕಾರಣವೆಂದರೆ ರಾಷ್ಟ್ರಪತಿ ಸ್ಥಾನ ಅವಿರೋಧವಾಗಿ ಆಯ್ಕೆಯಾಗಲಿ, ರಾಜಕೀಯ ರಣರಂಗವಾಗುವುದು ಬೇಡ ಎಂಬುದಾಗಿದೆ.
ಯುಪಿಎಯ ಪ್ರತಿಭಾ ಪಾಟೀಲ್ ವಿರುದ್ಧ ಎನ್‌ಡಿಎ ಪ್ರತ್ಯೇಕ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ರಾಜಕೀಯ ಚದುರಂಗದಾಟ ಆರಂಭವಾಗುವುದು ಎಂಬುದು ಫಾರ್ವರ್ಡ್ ಬ್ಲಾಕ್ ವಿರೋಧಕ್ಕೆ ಕಾರಣ.
ಈ ನಡುವೆ ಪ್ರತಿಭಾ ಪಾಟೀಲ್‌ಗೆ ಬೆಂಬಲ ಕೋರಿ ಪ್ರಧಾನಿ ಮನಮೋಹನ್ ಸಿಂಗ್ ಕಳೆದ ದಿನ ಎನ್‌ಡಿಎಯನ್ನು ವಿನಂತಿಸಿದ್ದರು. ಆದರೆ ಯುಪಿಎ ಅಭ್ಯರ್ಥಿಗೆ ಬೆಂಬಲಿಸಲಾರೆವ್ ಪ್ರತ್ಯೇಕ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿ ಬಿಜೆಪಿ ಮುಖಂಡರಾದ ಎಲ್ ಕೆ ಅಡ್ವಾಣಿ, ಎ ಬಿ ವಾಜಪೇಯಿ ಘೋಷಿಸಿದ್ದರು.
ಯುಪಿಎ ವಿರುದ್ಧ ಎನ್‌ಡಿಎ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ ಮಹಿಳಾ ಸಶಕ್ತೀಕರಣದ ಕುರಿತಾಗಿ ಅಪವಾದಕ್ಕೀಡಾಗಬಹುದು, ಮಹಿಳಾ ರಾಷ್ಟ್ರಪತಿಯಾದರೆ ಭಾರತವು ಮಹಿಳಾ ಪ್ರಾಧಾನ್ಯದ ಕುರಿತು ಪ್ರಬಲ ಸಂದೇಶ ನೀಡಿದಂತಾಗಬಹುದು ಎಂಬುದು ಫಾ.ಬ್ಲಾಕ್ ಹೇಳಿಕೆ.
ಆದರೆ ಬಿಜೆಪಿ ಕೂಡ ಮಹಿಳಾ ಮೀಸಲಾತಿ, ಮಹಿಳಾ ಸಶಕ್ತೀಕರಣಕ್ಕೆ ಪ್ರಾಧಾನ್ಯ ನೀಡುತ್ತಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ರಾಜಕೀಯ ನುಸುಳುವುದು ಬೇಡ. ಇದೊಂದು ಶಕ್ತಿಪ್ರದರ್ಶನದ ಅವಕಾಶವಿದ್ದರೂ ಹಾಗಾಗುವುದು ಬೇಡ ಎಂದು ಫಾ.ಬ್ಲಾಕ್ ಹೇಳಿಕೆಯಲ್ಲಿ ತಿಳಿಸಿದೆ.
|