ಹೊಸ ವಿವಾದಗಳ ಮೂಲಕ ಸದಾ ಸುದ್ದಿಯಲ್ಲಿರುವ ವಿಧಾನವನ್ನನುಸರಿಸಿರುವ ಬಾಲಿವುಡ್ ಅಭಿನೇತ್ರಿ ಶಿಲ್ಪಾ ಶೆಟ್ಟಿಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಜೊತೆಗಿನ ಸಂಬಂಧ ಹೊಸ ಆಯಾಮ ಪಡೆಯುತ್ತಿರುವಂತೆಯೇ, ಈ ಎಲ್ಲಾ ವದಂತಿಗಳನ್ನೂ ಸಾರಾಸಗಟಾಗಿ ಆಕೆ ನಿರಾಕರಿಸಿದ್ದಾರೆ.
ಶಿಲ್ಪಾ-ಇಮ್ರಾನ್ ಕುರಿತ ಹರಡಿರುವ ವದಂತಿಗಳೆಂದರೆ ಇವರಿಬ್ಬರೂ ಅರುಣಾ ನಾಯರ್ - ಲಿಸ್ ಹಲೇ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಆ ಬಳಿಕ ಇವರಿಬ್ಬರ ಸಂಬಂಧ, ಸಂಪರ್ಕಗಳು ಪ್ರಬಲವಾಗತೊಡಗಿತ್ತು ಎಂಬ ಮಾಹಿತಿ ಇತ್ತು.
ಪ್ರಸ್ತುತ ವರ್ಣರಂಜಿತ ವದಂತಿಗಳನ್ನು ನಿರಾಕರಿಸಿರುವ ಶಿಲ್ಪಾ ಶೆಟ್ಟಿ ಅಲ್ಲಿ ನಾವು ಕೇವಲ ಒಂದು ನಿಮಿಷ ಕಾಲ ಮಾತ್ರ ಸಂಧಿಸಿದ್ದೆವು, ಉಳಿದಂತೆ ಹರಡಿರುವ ಮಾಹಿತಿಗಳೆಲ್ಲಾ ಕಪೋಲ ಕಲ್ಪಿತಾ ಎಂದಿದ್ದಾರೆ. ಶಿಲ್ಪಾ ಶೆಟ್ಟಿಯ ಈ ಹೊಸ ವಿವಾದ ಹೊಸ ಆಯಾಮವನ್ನು ಪಡೆಯುವ ಸಾಧ್ಯತೆ ಇದೆ.
ಪಾಕಿಸ್ತಾನಿ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಈ ಮೊದಲು ಬ್ರಿಟಿಷ್ ಮೂಲದ ಜೆಮಿಮಾ ಗೋಲ್ಡ್‌ಸ್ಮಿತ್ ಎಂಬಾಕೆಯನ್ನು ವಿವಾಹವಾಗಿದ್ದರು. ಆದರೆ ಈ ಸಂಬಂಧ ವಿಚ್ಛೇಧನದಲ್ಲಿ ಕೊನೆಗೊಂಡಿತ್ತು. ಆ ಬಳಿಕ ಬ್ರಿಟಿಷ್ ಮೂಲದವಳೇ ಆದ ಫ್ಯಾಷನ್ ಡಿಸೈನರ್ ಜೊತೆ ಸಂಬಂಧವಿರಿಸಿದ್ದ ಮಾಹಿತಿ ಇತ್ತು.
ಶಿಲ್ಪಾ ಶೆಟ್ಟಿಯ ಬಿಗ್‌ಬ್ರದರ್ ಶೋದಲ್ಲಿನ ಜನಾಂಗೀಯ ನಿಂದೆ ವಿವಾದ, ಇತ್ತೀಚಿನ ಟೀವಿ ಚಾನೆಲ್‌ವೊಂದರ ಪ್ರದರ್ಶನದಲ್ಲಿ ಚುಂಬನ ವಿವಾದ , ಇದೀಗ ಪಾಕ್ ಕ್ರಿಕೆಟಿಗನ ಜೊತೆ ಸಂಬಂಧದ ವಿವಾದ ಇತ್ಯಾದಿಗಳೊಂದಿಗೆ ಶಿಲ್ಪಾ ಪ್ರತಿದಿನ ಸುದ್ದಿಯಾಗುತ್ತಿದ್ದಾರೆ.
|