ಮಧ್ಯಪ್ರದೇಶ ರಾಜ್ಯದ ರಾಯ್‌ಸೆನ್ ಎಂಬಲ್ಲಿ ಅಮೇರಿಕಾ ವಿರುದ್ಧ ಸಂಘಟಿತ ಹೋರಾಟ ಹಾಗೂ ಪ್ರಚಾರ ಕಾರ್ಯದ ತರಬೇತಿ ನೀಡುತ್ತಿದ್ದ ಮುಸ್ಲೀಂ ಮೂಲಭೂತ ವಾದಿ ಸಂಘಟನೆಯ 12 ಮಂದಿಯನ್ನು ಪೋಲೀಸರು ಬಂಧಿಸಿದ್ದಾರೆ.
ಬಂಧಿತ ಯುವಕರನ್ನು ಗ್ವಾಲಿಯರ್ ಮೂಲದ ಮಹಮ್ಮದ್ ಹನೀಫ್ ಅಲಿಯಾಸ್ ಗುಡ್ಡಾ, ಸಾಹೀದ್ ಗಂಜಾ ಆಲಿ,ಅಕ್ತರ್ ಆಲಿ, ದೆಹಲಿಯವರಾದ ಜಮಾಲ್ ಅಹಮ್ಮದ್, ಮೋಹಮ್ಮದ್ ಶಕೀಲ್, ಆಗ್ರಾದವರಾದ ರೈಸ್ ಅಹ್ಮದ್, ಮಹಮ್ಮದ್ ಅನೀಸ್,ಬೋಪಾಲದವರಾದ ಕಲೀಮಾ ಖಾನ್,ಆದಿಲ್ ಖಾನ್,ಶೇಕ್ ಜಾವೇದ್ ಎಂಬುದಾಗಿ ಗುರುತಿಸಲಾಗಿದೆ.
ಹಿಂದೂಧರ್ಮದಿಂದ ಮತಾಂತರ ಹೊಂದಿ ಮುಸಲ್ಮಾನರಾದ ಗುಂಜನ್ ಗೂಸಾ ಅಲ್ಯಾಸ್ ಮೊಹಮ್ಮದ್ ಇಸ್ಲಾಂ, ಗ್ವಾಲಿಯರ್, ರಾಮ್ ಅಲಿಯಾಸ್ ಅಬ್ದುಲ್ ರೆಹ್ಮಾನ್ ಎಂಬವರನ್ನು ಈ ತಂಡದೊಂದಿಗೆ ಬಂಧಿಸಲಾಗಿದೆ.
ಪ್ರಸ್ತ್ತುತ ತಂಡದಿಂದ ತರಬೇತಾದ ಮಹಮ್ಮದ್ ಮತೀನಾ ಹಾಗೂ ಅರ್ಥರ್ ಮಹಮ್ಮದ್ ಎಂಬವರನ್ನು ದೆಹಲಿಗೆ ಸಾಗಿಸಲು ಉದ್ದೇಶಿಸಲಾಗಿತ್ತು. ಇವರಿಬ್ಬರೂ ನಗರದ ಖಾಜಿಯಲ್ಲಿ ತಿಳಿಸಿದಾಗ ಖಾಜಿ ಪೊಲೀಸರಿಗೆ ತಿಳಿಸಿದ್ದರು. ಈ ಕಾರಣದಿಂದ ಬಂಧನಕಾರ್ಯ ಸುಗಮವಾಯಿತು ಎನ್ನಲಾಗಿದೆ.
ಇರಾಖ್ ಧಾಳಿ ಮತ್ತಿತರ ಪ್ರಕರಣಗಳು, ಸದ್ದಾಂ ಮರಣದಂಡನೆ, ಗಲ್ಫ್ ರಾಷ್ಟ್ರಗಳಲ್ಲಿ ಅಮೇರಿಕಾ ನೇತೃತ್ವದ ಮಿತ್ರಪಕ್ಷ- ಸೇನೆಯ ಅಧಿಪತ್ಯ ಇತ್ಯಾದಿಗಳನ್ನು ಸಹಿಸದೆ ಆ ಪ್ರದೇಶಗಳಲ್ಲಿ ಗೆರಿಲ್ಲಾದಾಳಿ ಮತ್ತು ರಕ್ತಸಿಕ್ತ ಹೋರಾಟದ ಛಾಯಾ ಸಮರ ನಡೆಸುತ್ತಿರುವ ಉಗ್ರಗಾಮಿ ಸಂಘಟನೆಗಳ ನೇತೃತ್ವ ಇವರಿಗಿರುವ ಕುರಿತು ತನಿಖೆ ನಡೆಯುತ್ತಿದೆ.
ರಾಯ್‌ಸೇನದ ಪೊಲೀಸ್ ವರಿಷ್ಠ ಕೆ.ಸಿ.ಜೈನ್ ಅವರು ತಿಳಿಸಿರುವಂತೆ, ದಿಲ್ಲಿಯಲ್ಲಿ ನೆಲ್ಸಿರುವ ಬಿಹಾರಿ ಮೂಲದ ಮುಸ್ಲೀಂ ವ್ಯಕ್ತಿಯ ನೇತೃತ್ವದಲ್ಲಿ ಈ 12 ಮಂದಿ ಯುವಕರಿಗೆ ತರಬೇತಿ ನೀಡಲಾಗುತ್ತಿತ್ತು. ತರಬೇತಿಯ ಬಳಿಕ ಅವರನ್ನು ದೆಹಲಿಗೆ ಸಾಗಿಸಿ, ಅಲ್ಲಿಂದ ಬೇರೆಡೆಗೆ ತರಬೇತಿನೀಡುವ, ಇನ್ನಿತರ ಇಸ್ಲಾಂ ಪರ ಕಾರ್ಯಗಳಿಗಾಗಿ ನಿಯೋಜಿಸುವ ಉದ್ದೇಶ ಹೊಂದಲಾಗಿತ್ತು ಎಂದಿದ್ದಾರೆ.
ಈ ಯುವಕರಿಗೆ ಇಸ್ಲಾಂ ಕುರಿತ ಬ್ರೈನ್ ವಾಶ್ ಮಾಡಿ ಹೊಸ ವಿಷಯಗಳ ಕುರಿತು ಮಾಹಿತಿ- ತರಬೇತಿ ನೀಡಲಾಗುತ್ತಿತ್ತು. ತರಬೇತಿಯ ಬಳಿಕ ಇಸ್ಲಾಂ ಪರ ಛಾಯಾ ಸಮರದ ರೂವಾರಿ ಒಸಾಮ ಬಿನ್ ಲಾಡೇನ್‌ನ್ನು ಭೇಟಿ ಮಾಡಿಸುವ ಉದ್ದೇಶವಿತ್ತು ಎಂಬುದಾಗಿ ತನಿಖೆಯಿಂದ ತಿಳಿದು ಬಂದಿದೆ.
ಇತ್ತೀಚೆಗಷ್ಟೇ ಇರಾಕ್ ಕಾರ್ಯಾಚರಣೆ ನಡೆಯುತ್ತಿರುವ ಅಮೇರಿಕಾ ವಿರುದ್ಧ ಹೋರಾಟ ಭಾರತದ ಹಲವೆಡೆ ಪ್ರಕಟವಾಗಿ ನಡೆಯುತ್ತಿರುವಂತೆಯೇ , ಇತ್ತ ಗೌಪ್ಯವಾಗಿ ತರಬೇತು ಕಾರ್ಯ ನಡೆಸುತ್ತಿರುವುದು ಆತಂಕವಾದದ ಹೊಸಮುಖವಾಗಿದೆ.
|