ರೈತರು ಹಾಗೂ ಉದ್ಯಮಿಗಳಿಂದ ಪ್ರಾಯೋಜಿತ ಸರ್ಕಾರಿ ಸಿಬ್ಬಂದಿಗಳ ಘರ್ಷಣೆ ಚಾಲನೆಯಲ್ಲಿರುವ ನಂದಿಗ್ರಾಮದಲ್ಲಿ ಬಾಂಬ್ ಎಸೆತ, ಬೆಂಕಿ ಇಕ್ಕಿದ ಪ್ರಕರಣದಲ್ಲಿ ನಾಲ್ವರು ಪೊಲೀಸರು ತೀವ್ರ ಗಾಯಗೊಂಡಿದ್ದಾರೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ನೇತೃತ್ವದ ಎಡರಂಗ ಸರ್ಕಾರವು ಹಿರಿಯ ಪೊಲೀಸ್ ಅಧಿಕಾರಿಗಳ ತುರ್ತು ಸಭೆ ಕರೆದು ಪರಿಸ್ಥಿತಿಯ ಅವಲೋಕನ ನಡೆಸಿದೆ.
ನಂದಿಗ್ರಾಮದಲ್ಲಿ ಕೈಗಾರಿಕೆಗಾಗಿ ವಿಶೇಷ ಆರ್ಥಿಕ ವಲಯಕ್ಕಾಗಿ ಸಂತ್ರಸ್ತರಾದ ರೈತರ ಪುನರ್ವಸತಿ ಕೇಂದ್ರದ ಮೇಲೆ ಬಾಂಬ್ ಎಸೆತ ಹಾಗೂ ಪೊಲೀಸ್ ಕಾವಲುಕೇಂದ್ರ ದ ಮೇಲೆ ಬಾಂಬ್ ಎಸೆದು ಬೆಂಕಿ ಇಕ್ಕಲಾಗಿದೆ.
ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ವಿಭಾಗ ಪೊಲೀಸ್ ಮಹಾ ನಿರೀಕ್ಷಕ ರಾಜ್ ಕನೋಜಿಯಾ ಅವರು ನೀಡಿರುವ ಹೇಳಿಕೆಯಂತೆ ಕೃತ್ಯದಲ್ಲಿ ನಾಲ್ಕು ಮಂದಿ ಪೊಲೀಸರು ಗಾಯಗೊಂಡಿದ್ದು, ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ.
ಸಂತ್ರಸ್ತರ ಶಿಬಿರದಲ್ಲಿ ಮುಖ್ಯವಾಗಿ ಆಡಳಿತಾರೂಢ ಭಾರತೀಯ ಮಾರ್ಕ್ಸಿಸ್ಟ್ ಕಮ್ಯೂನಿಸ್ಟ್ ಪಕ್ಷದ ಬೆಂಬಲಿತರು ನೆಲೆಸಿದ್ದರು. ಕೃತ್ಯವನ್ನು ತೃಣಮೂಲ ಕಾಂಗ್ರೆಸ್ ಬೆಂಬಲಿತ ಭೂಸ್ವಾಧೀನ ವಿರೋಧಿಸುವ ಸಂಘಟನೆಯಾದ ಭೂಮಿ ಉಚಡ್ ಪ್ರತಿರೋಧ ಕಮಿಟಿಯ ಕಾರ್ಯಕರ್ತರು ಪಾಲ್ಗೊಂಡಿರುವುದಾಗಿ ಸಂಶಯಿಸಲಾಗಿದೆ.
ಭೂಮಿ ಉಚಡ್ ಪ್ರತಿರೋಧ ಕಮಿಟಿ ಹಾಗೂ ಸ್ಥಳೀಯ ಸಿಪಿಐಎಂ ಸಂಘಟನೆಗಳು ಕೃತ್ಯದ ಕುರಿತಂತೆ ಪರಸ್ಪರ ಆರೋಪವೆಸಗಿದ್ದಾರೆ. ಪ್ರದೇಶದಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ.
ಪೊಲೀಸ್ ಹೊರಕಾವಲು ಕೇಂದ್ರದ ಮೇಲೆ ಎರಡು ಬಾರಿ ಆಕ್ರಮಣಗೈದ ಆಯುಧಧಾರಿ ತಂಡವನ್ನು ಚೆದುರಿಸಲು ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಬೆದರಿಸಬೇಕಾಗಿ ಬಂತು.
|