ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಮಹಿಳಾ ಪ್ರಾಬಲ್ಯಕ್ಕೆ ಸಂಸತ್ತು ಪ್ರಯತ್ನಿಸಲಿ- ಪ್ರತಿಭಾ
webdunia
ಕಾಂಗ್ರೆಸ್ ಹಾಗೂ ಎಡಪಂಥೀಯ ಸಂಘಟನೆಗಳಿರುವ ಯುಪಿಎ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿ ಪ್ರತಿಭಾ ಪಾಟೀಲ್‌ ಅವರು ಇಂದು ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ ಹಾಗೂ ಪ್ರಧಾನಮಂತ್ರಿ ಮನಮೋಹನ್‌ ಸಿಂಗ್ ಅವರನ್ನು ಭೇಟಿ ಮಾಡಿ, ಕೃತಜ್ಞತೆ ಸಲ್ಲಿಸಿದರು.

ರಾಜಸ್ತಾನ ರಾಜ್ಯದ ರಾಜ್ಯಪಾಲೆಯಾಗಿರುವ ಪ್ರತಿಭಾ ಅವರು ದೆಹಲಿ ತಲುಪಿದ ತಕ್ಷಣ ಕಾಂಗ್ರೆಸ್ ನಾಯಕಿ ಸೋನಿಯಾ ಅವರ ನಿವಾಸಕ್ಕೆ ತೆರಳಿದರು. ಬಳಿಕ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಪ್ರಧಾನಿ ಸಿಂಗ್ ಅವರ ಅಧಿಕೃತ ನಿವಾಸಕ್ಕೆ ತೆರಳಿ ಅವರನ್ನೂ ಭೇಟಿ ಮಾಡಿದರು.

ರಾಷ್ಟ್ರೀಯ ಉಭಯ ನಾಯಕರನ್ನು ಭೇಟಿ ಮಾಡಿದ ಪ್ರತಿಭಾ ಪಾಟೀಲ್ ಅವರು ಅಭ್ಯರ್ಥಿಯಾಗಿ ಆಯ್ಕೆಮಾಡಿರುವುದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.ಅತ್ಯುನ್ನತ ಸ್ಥಾನಕ್ಕಾಗಿ ತನ್ನ ಅಭ್ಯರ್ಥಿತನದ ಆಯ್ಕೆಯು ಭಾರತೀಯ ಮಹಿಳೆಗೆ ಲಭಿಸುವ ಗೌರವವಾಗಿದೆ. ಇದು ಲಿಂಗತಾರತಮ್ಯ ಧೋರಣೆಯನ್ನು ನಿವಾರಿಸಲು ನೆರವಾಗಬಹುದೆಂದರು.

ಈ ಕ್ರಮದಿಂದ ಇತರ ಮಹಿಳೆಯರಿಗೂ ಮುಂದುವರಿಯಲು ಪ್ರೇರಣೆ ಲಭಿಸಿ ಮಹಿಳಾ ಸಶಕ್ತೀಕರಣಕ್ಕೆ ಕಾರಣವಾಗಬಹುದು ಎಂದದ್ದಾರೆ. ಮಹಿಳಾ ಸಶಕ್ತೀಕರಣ ತಾನಾಗಿಯೇ ಲಭಿಸಲಾರದು ಅದಕ್ಕಾಗಿ ಮಹಿಳೆ ಪ್ರಯತ್ನಿಸಬೇಕು ಎಂದು ಸಲಹೆಯಿತ್ತರು. ಮಹಿಳಾ ಮೀಸಲಾತಿ ಮಸೂದೆಯ ಕುರಿತು ಸಂಸತ್ ಗಂಭೀರವಾಗಿ ಪರಿಗಣಿಸಿ ನಿರ್ಣಯ ಸ್ವೀಕರಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.
ಮತ್ತಷ್ಟು
ನಂದಿಗ್ರಾಮ್-ಘರ್ಷಣೆ 4ಪಿಸಿ ಗಾಯ
ಅಮೇರಿಕಾ ವಿರೋಧಿ ತರಬೇತಿ-12ಸೆರೆ
ಶಿಲ್ಪಾಶೆಟ್ಟಿ-ಇಮ್ರಾನ್‌ಸಂಬಂಧ ವಿವಾದ
ಪಾಟೀಲ್‌ ವಿರುದ್ಧ ಅಭ್ಯರ್ಥಿ- ಎನ್‌ಡಿಎ ಭಿನ್ನಮತ
ಗೋವಾ ಸ್ಪೀಕರ್ -ಸೋತುಗೆದ್ದ ರಾಣೆ
ದೆಹಲಿಯಲ್ಲಿ ಮೈಮನಗಳಿಗೆ ತಂಪೆರದ ಮಳೆ