ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ರಾಷ್ಟ್ರಪತಿ ಚುನಾವಣೆ- ಅಧಿಕೃತ ಘೋಷಣೆ
webdunia
ದೇಶದ ರಾಷ್ಟ್ರಪತಿ ಚುನಾವಣೆಗಾಗಿ ಚುನಾವಣಾ ಆಯೋಗ ಇಂದು ಅಧಿಕೃತ ಘೋಷಣೆ ಹೊರಡಿಸಿದೆ. ಒಬ್ಬರಿಗಿಂತ ಹೆಚ್ಚು ಮಂದಿ ಅಭ್ಯರ್ಥಿಗಳಿದ್ದಲ್ಲಿ ಜುಲೈ 19ರಂದು ಮತದಾನ ಜರುಗಲಿದೆ.

ಅಭ್ಯರ್ಥಿಗಳು ನಾಮಪತ್ರಸಲ್ಲಿಸಲು ಜೂನ್‌16ರಿಂದ 30ರ ವರೆಗೆ ಅವಕಾಶವಿದೆ. ಜುಲೈ 2ರಂದು ಸೂಕ್ಷ್ಮ ಪರಿಶೀಲನೆ, ನಾಮಪತ್ರ ವಾಪಸಾತಿಗೆ ಜುಲೈ 4 ಕೊನೆದಿನ.

ಮತದಾನದ ಬಳಿಕ ಜುಲೈ 21ರಂದು ಮತ ಎಣಿಕೆ ಜರುಗಿ ಅಂದೇ ವಿಜೇತರ ಹೆಸರು ಪ್ರಕಟಿಸಲಾಗುವುದು. ಹಾಲಿ ರಾಷ್ಟ್ಪಪತಿ ಡಾ ಎಪಿಜೆ ಅಬ್ದಲ್‌ ಕಲಾಂ ಅವರ ಅಧಿಕಾರಾವಧಿ ಜುಲೈ 24ರಂದುಕೊನೆಗೊಳ್ಳಲಿದೆ.

ಕಾಂಗ್ರೆಸ್‌ಎಡಪಂಥೀಯ ಮೈತ್ರಿಯ ಯುಪಿಎ ಅಭ್ಯರ್ಥಿಯಾಗಿ ರಾಜಸ್ತಾನದ ರಾಜ್ಯಪಾಲ ಪ್ರತಿಭಾ ಪಾಟೀಲ್‌ ಅವರ ಹೆಸರನ್ನು ಘೋಷಿಸಲಾಗಿದೆ. ಬಿಜೆಪಿ ಮಿತ್ರಪಕ್ಷಗಳಿರುವ ಎನ್‌ಡಿಎ ಅಭ್ಯರ್ಥಿಯ ಹೆಸರನ್ನು ಇನ್ನೂ ಪ್ರಕಟಿಸಿಲ್ಲ.

ಶಾಸಕರು ಹಾಗೂ ಸಂಸದರು ಮತಚಲಾಯಿಸಲು ಅರ್ಹರು. ರಾಜ್ಯಸಭಾಲೋಕಸಭಾಸದಸ್ಯರೂ ಸೇರಿದಂತೆ 776 ಸಂಸದರು, 4120 ಶಾಸಕರಿದ್ದು ಇವರಲ್ಲಿ ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ ಮತ್ತು ಪಾಂಡಿಚೇರಿಯ ಪ್ರತಿನಿಧಿಗಳೂ ಸೇರುತ್ತಾರೆ. ಒಟ್ಟು ಮತಗಳ ಸಂಖ್ಯೆ 1098882 ಆಗಿರುತ್ತದೆ.

ಸಂಸದರು ಹಾಗೂ ಶಾಸಕರ ಪ್ರಾಬಲ್ಯವನ್ನನುಸರಸಿ ಯುಪಿಎಗೆ 5.13 ಲಕ್ಷ ಮತಮೌಲ್ಯ, ಎನ್‌ಡಿಎಗೆ 3.54ಮತಗಳ ಮೌಲಯ ತೃತೀಯ ರಂಗಕ್ಕೆ 1.05 ಲಕ್ಷ ಮತಗಳ ಮೌಲಯವಿರುತ್ತದೆ ಎಂದು ತಿಳಿಸಲಾಗಿದೆ.
ಮತ್ತಷ್ಟು
ಮಹಿಳಾ ಪ್ರಾಬಲ್ಯಕ್ಕೆ ಸಂಸತ್ತು ಪ್ರಯತ್ನಿಸಲಿ- ಪ್ರತಿಭಾ
ನಂದಿಗ್ರಾಮ್-ಘರ್ಷಣೆ 4ಪಿಸಿ ಗಾಯ
ಅಮೇರಿಕಾ ವಿರೋಧಿ ತರಬೇತಿ-12ಸೆರೆ
ಶಿಲ್ಪಾಶೆಟ್ಟಿ-ಇಮ್ರಾನ್‌ಸಂಬಂಧ ವಿವಾದ
ಪಾಟೀಲ್‌ ವಿರುದ್ಧ ಅಭ್ಯರ್ಥಿ- ಎನ್‌ಡಿಎ ಭಿನ್ನಮತ
ಗೋವಾ ಸ್ಪೀಕರ್ -ಸೋತುಗೆದ್ದ ರಾಣೆ