ಭಾರತ ಹಾಗೂ ಪಾಕಿಸ್ತಾನ ಸೇರಿದಂತೆ ವಿಶ್ವದೆಲ್ಲೆಡೆ ಇರುವ ಸಿಖ್ ಸಮುದಾಯದವರು ಇಂದು ಐದನೇ ಸಿಖ್ ಗುರು ಅರ್ಜುನ್‌ದೇವ್ ಅವರ 401ನೇ ಪುಣ್ಯತಿಥಿ ಆಚರಿಸಿದರು.
ಸಿಖ್ ಗುರುದ್ವಾರ ಸಂಕೀರ್ಣವಿರುವ ಪಂಜಾಬಿನ ಅಮೃತಸರ್‌ದಲ್ಲಿ ಸಿಕ್ ಅನುಭಾವಿಗಳು ಗುರುವಿನ ಸ್ಮರಣಾರ್ಥ ಪ್ರಾರ್ಥನೆ, ಪೂಜಾವಿಧಿಗಳನ್ನು ನಿರ್ವಹಿಸಿದರು. ಸ್ವರ್ಣಮಂದಿರದ ಪ್ರಾಕಾರದಲ್ಲಿರುವ ಪವಿತ್ರಪುಷ್ಕರಣಿ (ಕೊಳ)ದಲ್ಲಿ ಮಿಂದು ಪಾವನರಾದರು.
ಪಾಕಿಸ್ತಾನದಲ್ಲಿಯೂ ಸಿಕ್ ಗುರುವನ್ನು ಸ್ಮರಿಸಲಾಯಿತು. ಲಾಹೋರ್‌ನಲ್ಲಿ ಭಾರತದಿಂದ ತೆರಳಿದ ಸಿಖ್ ಧರ್ಮೀಯರಿಗಾಗಿ ಅಲ್ಲಿನ ಸರ್ಕಾರ ವಿಶೇಷ ಸೌಲಭ್ಯವನ್ನು ಏರ್ಪಡಿಸಿತ್ತು. ಲಾಹೋರ್‌ನಲ್ಲಿರುವ ಗರುದ್ವಾರ ಡೇರಾ ಸಾಹೀಬ್ ವಠಾರದಲ್ಲಿ ವಿಶ್ವದೆಲ್ಲೆಡೆಯಿಂದ ಆಗಮಿಸಿದ ಸಿಖ್‌ರು ಸಮಾವೇಶಗೊಂಡು ಪ್ರಾರ್ಥನಾ ವಿಧಿ ನಿರ್ವಹಿಸಿದರು.
ಭಾರತ ಹಾಗೂ ಪಾಕಿಸ್ತಾನದಲ್ಲಿ ಸಿಕ್ ಧರ್ಮೀಯರಿಗಾಗಿ ವಿಶೇಷ ಪ್ರಾರ್ಥನಾ ಕೂಟಗಳನ್ನು ಆಯಾ ಗುರುದ್ವಾರಗಳಲ್ಲಿ ನಡೆಸಿಕೊಡಲಾಗಿತ್ತು.
|