ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ರಬ್ಬರ್‌ಸ್ಟಾಂಪ್‌ ರಾಷ್ಟ್ರಪತಿಯಾಗಲಾರೆ- ಪ್ರತಿಭಾ
webdunia
ನಾನು ಕೇವಲ ಮುದ್ರೆ ಒತ್ತುವ ರಾಷ್ಟ್ರಪತಿ( ರಬ್ಬರ್‌ ಸ್ಟಾಂಪ್) ಆಗಿರಲು ಇಚ್ಛಿಸಲಾರೆ , ಅಧಿಕಾರಕ್ಕೇರಿದರೆ ರಾಷ್ಟ್ರಪತಿ ಹುದ್ದೆಯ ಪರಮಾಧಿಕಾರವನ್ನು ಬಳಸುವುದಾಗಿ ಕಾಂಗ್ರೆಸ್‌ ನೇತೃತ್ವದ ಯುಪಿಎ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿ ಪ್ರತಿಭಾ ಪಾಟೀಲ್ ಘೋಷಿಸಿದ್ದಾರೆ.

ರಾಷ್ಟ್ರಪತಿ ಆಯ್ಕೆಗಾಗಿ ಚುನಾವಣಾ ಕಣ ಇನ್ನೂ ಸ್ಪಷ್ಟವಾಗಿಲ್ಲ ಈ ಹಂತದಲ್ಲೇ ಪ್ರತಭಾ ಪಾಟೀಲ್‌ ಮುಂದಿನ ರಾಷ್ಟ್ರಪತಿ ಎಂಬ ವಿಧಾನದಲ್ಲಿ ದೇಶಾದ್ಯಂತ ಅವರ ಪ್ರಭಾವಳಿ ಹೊಮ್ಮುತ್ತಿರುವಂತೆಯೇ ಅವರು ಈ ಹೇಳಿಕೆ ನೀಡಿದ್ದಾರೆ.

ಮಹಿಳಾ ಸಬಲೀಕರಣ, ಮಹಿಳಾ ಸ್ವಾತಂತ್ರ್ಯ, ಮೀಸಲಾತಿ ಮುಂತಾದವುಗಳು ಕುರಿತು ನಿನ್ನೆಯಷ್ಟೇ ಹೇಳಿಕೆ ನೀಡಿ, ರಾಷ್ಟ್ರದ ಪರಮೋಚ್ಛ ಸಾಂವಿಧಾನಿಕ ಸ್ಥಾನಕ್ಕೆ ಅಭ್ಯರ್ಥಿಯಾಗಿ ತನ್ನನ್ನು ಆರಿಸುವ ಮೂಲಕ ಮಹಿಳಾ ಸಶಕ್ತೀಕರಣದ ಸ್ಪಷ್ಟ ಸೂಚನೆ ನೀಡಲಾಗಿದೆ ಎಂದವರು ತಿಳಿಸಿದ್ದರು.

ಕಾಂಗ್ರೆಸ್ ಪಕ್ಷ ಹಾಗೂ ನೆಹರೂ ಕುಟುಂಬದೊಂದಿಗೆ ತೀರಾ ನಿಷ್ಠೆ ಹೊಂದಿರುವ ಪ್ರತಿಭಾ ಪಾಟೀಲ್‌ ಅವರು ಇದೀಗ ಮಹಿಳಾ ಪ್ರಾಬಲ್ಯ ಮಾತ್ರವಲ್ಲ ರಾಷ್ಟ್ರಪತಿ ಹುದ್ದೆಯನ್ನೂ ಪ್ರಬಲಗೊಳಿಸುವ ಸಾಂವಿಧಾನಿಕ ಹೇಳಿಕೆ ನೀಡಿರುವುದು. ಸದ್ಯ ದೇಶದಲ್ಲಿರುವ ಪ್ರಧಾನಮಂತ್ರಿ ಪ್ರಾಧಾನ್ಯದ ಶಾಸಕಾಂಗದ ಆದ್ಯತೆಯ ಕುರಿತು ಬೆಳಕು ಚೆಲ್ಲಿದೆ.

ಸದ್ಯ ಅವರು, ತಾನು ರಾಷ್ಟ್ರಪತಿಯಾದರೆ ಯೋಚನೆ ಹಾಗೂ ಯೋಜನೆ ಸ್ವಾತಂತ್ರ್ಯವನ್ನು ಸಮರ್ಪಕವಾಗಿ ಬಳಸಿಕೊಳ್ಳುವೆ ಎಂಬರ್ಥದ ಸೂಚನೆ ನೀಡಿದ್ದಾರೆ. ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ಮೊದಲು ರಾಜಸ್ತಾನ ರಾಜ್ಯಪಾಲ ಹುದ್ದೆ ತ್ಯಜಿಸುವುದಾಗಿ ತಿಳಿಸಿದ್ದಾರೆ.
ಮತ್ತಷ್ಟು
ಬಾಹ್ಯಾಕಾಶದಲ್ಲಿ ಸುನಿತಾ ದಾಖಲೆ
ಸಿಖ್ ಗುರು ಅರ್ಜುನ್‌ದೇವ್ ಪುಣ್ಯತಿಥಿ
ರಾಷ್ಟ್ರಪತಿ ಚುನಾವಣೆ- ಅಧಿಕೃತ ಘೋಷಣೆ
ಮಹಿಳಾ ಪ್ರಾಬಲ್ಯಕ್ಕೆ ಸಂಸತ್ತು ಪ್ರಯತ್ನಿಸಲಿ- ಪ್ರತಿಭಾ
ನಂದಿಗ್ರಾಮ್-ಘರ್ಷಣೆ 4ಪಿಸಿ ಗಾಯ
ಅಮೇರಿಕಾ ವಿರೋಧಿ ತರಬೇತಿ-12ಸೆರೆ