ನಗರದ ಮೆಕ್ಕಾ ಮಸೀದಿಯಲ್ಲಿ ಮೇ18ರಂದು ಸಂಭವಿಸಿದ ಬಾಂಬ್ ಸ್ಫೋಟದ ಆರೋಪಿ ಲಷ್ಕರ್ ಇ ತೋಯ್ಬಾ ಸಂಘಟನೆಯ ಬಂಧಿತ ಉಗ್ರಗಾಮಿ ನಯೀಂ ಅಲಿಯಾಸ್ ಸಮೀರ್ ಎಂಬಾತ ಜೈಲಿನಿಂದ ತಪ್ಪಿಸಿಕೊಂಡ ಎರಡು ತಾಸುಗಳಲ್ಲೇ ಮತ್ತೆ ಪೊಲೀಸರು ಬಂಧಿಸಿದ್ದಾರೆ.
ಸಿಕಂದರಾ ಬಾದ್‌ನಲ್ಲಿ ನಿರಂತರ ಎರಡು ತಾಸುಗಳ ಕಾಲ ಬೆನ್ನಟ್ಟಿ ಹುಡುಕಾಡಿ ಆತನನ್ನು ಮತ್ತೆ ಜೈಲಿಗೆ ಸೇರಿಸಲಾಗಿದೆ. ಮೆಕ್ಕಾ ಮಸೀದಿ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಲಷ್ಕರ್ ಇ ತೋಯ್ಬಾ ಅನುಯಾಯಿ ಉಗ್ರಗಾಮಿಯಾಗಿರುವ ನಯೀಂ ಪ್ರಸ್ತುತ ಸಿನಿಮಾಯ ಘಟನೆಗೆ ಕಾರಣವಾಗಿದ್ದನು.
ಈತನನ್ನು ಜೂನ್ 7ರಂದು ಮುಂಬೈಯಿಂದ ಕರೆತಂದು ಹೈದರಾಬಾದ್ ಜೈಲಿಗೆ ಸೇರಿಸಲಾಗಿತ್ತು. ಸ್ಫೋಟ ಕುರಿತ ತನಿಖೆಗಾಗಿ ಜೈಲಲ್ಲಿ ಇರಿಸಲಾಗಿತ್ತು. ಇಂದು ಬೆಳಗ್ಗೆ ಮೂತ್ರ ಮಾಡುವ ನೆಪದಲ್ಲಿ ಹೊರಗಿಳಿದ ಈತ ಪೊಲೀಸರ ಕೈಯಿಂದ ತಪ್ಪಿಸಿ ಗೋಡೆ ಹಾರಿ ಪಲಾಯನ ಗೈಯ್ಯುವಲ್ಲಿ ಯಶಸ್ವಿಯಾಗಿದ್ದನು.
ಪೊಲೀಸರು ಆ ಬಳಿಕ ಈತನನ್ನು ಗಲ್ಲಿಗಲ್ಲಿಗಳಲ್ಲಿ ಹುಡುಕಾಡಿ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಈತನನ್ನು ಮುಂಬೈ ಪೊಲೀಸರು ಇತರ ನಾಲ್ವರೊಂದಿಗೆ ಗಡಿ ರಕ್ಷಣಾ ಪಡೆಯವರು ಬಾಂಗ್ಲಾ ಗಡಿಯಿಂದ ಸೆರೆಹಿಡಿದಿದ್ದರು. ಮಂಪರು ಪರೀಕ್ಷೆ ತನಿಖೆಯ ವೇಳೆ ಈತ ಜುಲೈ 11ರ ಮಂಬೈ ರೈಲು ಗಾಡು ಸ್ಪೋಟ, ಆರ್‌ಡಿಎಕ್ಸ್ ಸ್ಫೋಟಕ ಸಾಗಣೆ ಇತ್ಯಾದಿಗಳಲ್ಲಿ ಶಾಮೀಲಾತಿ ಇರುವುದನ್ನು ಒಪ್ಪಿಕೊಂಡಿದ್ದನು.
|