ರಾಷ್ಟ್ರಪತಿ ಚುನಾವಣೆಗೆ ಅರ್ಹ ಅಭ್ಯರ್ಥಿ ಆಯ್ಕೆಗಾಗಿ ಇತ್ತೀಚೆಗಷ್ಟೇ ಉದಯಿಸದ ತೃತೀಯ ರಂಗ ಸೋಮವಾರ ಸಭೆಸೇರಲಿದೆ, ಆದರೆ ಭಾನುವಾರ ಈ ಕುರಿತು ಸಭೆ ಸೇರಿದ ಸಮಾಜವಾದಿ ಪಕ್ಷವು ಹೊಣೆಗಾರಿಕೆಯನ್ನು ವರಿಷ್ಠ ಮುಲಾಯಂ ಸಿಂಗ್ ಯಾದವ್ ಅವರಿಗೆ ವಹಿಸಲಾಗಿದೆ.
ಬಿಜೆಪಿ ಹಾಗೂ ಕಾಂಗ್ರೆಸ್‌ನಿಂದ ಸಮಾನ ಅಂತರದಲ್ಲಿರುತ್ತೇವೆ ಹಾಗೂ ರಾಜಕೀಯ ಭೂಪಟದಿಂದ ಈ ಎರಡು ಪಕ್ಷಗಳನ್ನು ಅಳಿಸಿ ಹಾಕಬೇಕೆಂಬ ಮೂಲ ಮಂತ್ರದೊಂದಿಗೆ ತೃತೀಯ ರಂಗ ಉದಯವಾಗಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಅವರು ಕೈಗೊಳ್ಳುವ ನಿರ್ಧಾರ ಮಹತ್ವದ್ದಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಸಮಾಜವಾದಿ ಪಕ್ಷದ ನಾಯಕ ಅಮರ ಸಿಂಗ್ ಅವರು ಯಾವ ಅಭ್ಯರ್ಥಿಯನ್ನು ಬೆಂಬಲಿಸಬೇಕು, ಸ್ವತಃ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆ ಎಂದು ತೃತೀಯ ರಂಗದ ಸಭೆ ನಿರ್ಧರಿಸುವುದು. ಸಮಾಜವಾದಿ ಪಕ್ಷದ ನಿರ್ಧಾರದ ಹೊಣೆ ಮುಲಾಯಂ ಅವರಿಗೆ ವಹಿಸಲಾಗಿದೆ ಎಂದರು.
ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಭೈರೋನ್ ಸಿಂಗ್ ಶೆಕಾವತ್ ಅವರನ್ನು ಬೆಂಬಲಿಸುವಿರಾ ಎಂಬ ಪ್ರಶ್ನೆಗೆ ಅದು ತೃತೀಯ ರಂಗದ ಸಮಗ್ರ ನಿರ್ಧಾರ ಎಂದರು. ತೃತೀಯ ರಂಗದಲ್ಲಿ ಎಐಎಡಿಎಂಕೆ,ಟಿಡಿಪಿ, ಸಮಾಜವಾದಿ ಪಕ್ಷ,ಎಜಿಪಿ,ಐಎನ್‌ಡಿಎಲ್,ಕೇರಳಾಕಾಂಗ್ರೆಸ್ (ಟಿ),ಜಾರ್ಖಂಡ್ ವಿಕಾಸ್ ಮೋರ್ಛಾ,ಎಂಡಿಎಂಕೆ ಮುಂತಾದ ಪಕ್ಷಗಳಿವೆ.
|