ತ್ವೇಷಾವಸ್ಥೆಯಲ್ಲಿರುವ ನಂದಿಗ್ರಾಮ್‌ದಲ್ಲಿ ಇಂದು ಸಿಪಿಐಎಂ ಪ್ರತಿಭಟನಾಕಾರರು ಪತ್ರಕರ್ತರತ್ತ ಸ್ಫೋಟಕ ಎಸೆದು, ಗುಂಡುಹಾರಿಸಿದ ಪ್ರಕರಣ ಸಂಭವಿಸಿದೆ, ಪ್ರದೇಶದಲ್ಲಿ ಉದ್ವಿಗ್ನತೆ ನೆಲೆಸಿದೆ.
ಪಶ್ಚಿಮ ಬಂಗಾಳದ ಬುರ್ದ್ವಾನ್, ಕುಜೋರಿ ಮುಂತಾದ ಜಿಲ್ಲೆಗಳಲ್ಲಿ ನಿರಂತರ ಮೂರನೇ ದಿನವೂ ಉದ್ವಿಗ್ನತೆ ಮುಂದುವರಿದಿದೆ. ಮರೆಯಲ್ಲಿ ನಿಂತು 25 ಸುತ್ತು ಗುಂಡು ಹಾರಿಸಿ ಬಾಂಬ್ ಎಸೆದ ಪ್ರಕರಣ ಪ್ರತಿಭಟನಾಕಾರರಿಂದ ಸಂಭವಿಸಿದೆ. ಇದರಲ್ಲಿ ಸಿಸಿಐಎಂ ಬೆಂಬಲಿತರಿದ್ದಾರೆ ಎಂದು ಹೇಳಲಾಗಿದೆ.
ಬಾಂಬ್ ಎಸೆತ ಹಾಗೂ ಗುಂಡು ಹಾರಿಸುವಿಕೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂಬದಾಗಿ ಪೊಲೀಸರು ತಿಳಿಸಿದ್ದಾರೆ.ತೃಣಮೂಲ ಕಾಂಗ್ರೆಸ್ ಬೆಂಬಲಿತ ಭೂಮಿ ಉಚಡ್ ಪ್ರತಿರೋಧ ಕಮಿಟಿ ಹೇಳುವಂತೆ ಸಿಪಿಐಎಂ ಸಂಘಟನೆ ಹೊರಗಿನಿಂದ ದುಷ್ಕರ್ಮಿಗಳನ್ನು ಕರೆತಂದು ಬಾಂಬ್ ಎಸೆತದಂತಹ ಕೃತ್ಯ ನಡೆಸುತ್ತಿದೆ.
ನಿನ್ನೆ ಸಂತ್ರಸ್ತರ ನಿವಾಸಗಳು ಹಾಗೂ ಪೊಲೀಸ್ ಹೊರಠಾಣೆಯ ಮೇಲೆ ಬಾಂಬ್ ಎಸೆದ ಕಾರಣ ನಾಲ್ಕು ಮಂದಿ ಸಿಬ್ಬಂದಿ ಗಾಯಗೊಂಡಿದ್ದರು. ಅಆ ಬಳಿಕ ಬರ್ದ್ವಾನ್ ಜಿಲ್ಲೆಯಲ್ಲಿ ಘರ್ಷಣೆ ಹಾಗೂ ಪ್ರತಿಭಟನೆಯಲ್ಲಿ ತೊಡಗಿದ್ದ ಜನರನ್ನು ಚೆದುರಿಸಲು ಪೊಲೀಸರು ನಡೆಸಿದ ಲಾಠಿಪ್ರಹಾರದಲ್ಲಿ ಸಿಬ್ಬಂದಿ ಸೇರಿದಂತೆ 35 ಮಂದಿ ಗಾಯಗೊಂಡಿದ್ದರು.
ವಿಶೇಷ ಆರ್ಥಿಕ ವಲಯ ಯೋಜನೆಗಾಗಿ ಸರ್ಕಾರ ರೈತರಿಂದ ಸುಮಾರು 305 ಎಕ್ರೆ ಜಮೀನು ಸ್ವಾಧೀನ ಪಡಿಸಿದ್ದು, ಅರ್ಹ ಪರಿಹಾರ ಧನ ವಿತರಿಸಬೇಕೆಂದು ಆಗ್ರಹಿಸಿ ಹೋರಾಟ ನಡೆಯುತ್ತಿದೆ. ಪೊಲೀಸ್ ಬಿಗುಪಹರೆ ಇದ್ದರೂ ಹೊರಾಟ ಮುಂದುವರಿದಿದೆ.
|