ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಜೂ.23- ಪ್ರತಿಭಾ ನಾಮಪತ್ರ ಸಲ್ಲಿಕೆ
webdunia
ಕಾಂಗ್ರೆಸ್ ಹಾಗೂ ಎಡಪಂಥೀಯ ಒಕ್ಕೂಟವಾದ ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್ ಅವರು ರಾಷ್ಟ್ರಪತಿ ಚುನಾವಣೆಗಾಗಿ ತಮ್ಮ ನಾಮಪತ್ರವನ್ನು ಜೂನ್ 23ರಂದು ಸಲ್ಲಿಸುವರು ಎಂಬ ನಿರೀಕ್ಷೆ ಇದೆ.

ಕಳೆದೆರಡು ದಿನಗಳಿಂದೀಚೆಗೆ ದೆಹಲಿಯಲ್ಲಿ ಮೊಕ್ಕಾಂ ಹೂಡಿರುವ ರಾಜಸ್ತಾನದ ರಾಜ್ಯಪಾಲರಾಗಿರುವ ಪ್ರತಿಭಾ ಪಾಟೀಲ್ ನಾಮಪತ್ರ ಸಲ್ಲಿಸುವುದಕ್ಕೆ ಮುನ್ನ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡುವರು ಎಂಬುದಾಗಿ ಆಪ್ತವಲಯಗಳು ತಿಳಿಸಿವೆ.

ಚುನಾವಣೆಯ ಹಿನ್ನೆಲೆಯಲ್ಲಿ ಅವರು ಇಂದು ವಿವಿಧ ಪಕ್ಷಗಳ ಚುನಾಯಿತ ಸದಸ್ಯರನ್ನು ಭೇಟಿಯಾಗಿ ಮತಯಾಚಿಸುವರು ಎಂದೆನ್ನಲಾಗಿದೆ. ತನ್ಮಧ್ಯೆ ಪ್ರತಿಭಾ ಅವರು ಜನಮೋರ್ಛಾ ನಾಯಕ ಮಾಜಿ ಪ್ರಧಾನಿ ವಿ ಪಿ ಸಿಂಗ್, ಹಿರಿಯ ಕಾಂಗ್ರೆಸಿಗ ಅಭ್ಯರ್ಥಿಯಾದಿಯಲ್ಲಿದ್ದ ಕರಣ ಸಿಂಗ್ ಇವರನ್ನು ಭೇಟಿಯಾಗಿದ್ದಾರೆ.

ಲೋಕ ಸಭಾಧ್ಯಕ್ಷ ಸೋಮನಾಥ ಚಾಟರ್ಜಿ, ಕೇಂದ್ರ ಮಂತ್ರಿ ಅರ್ಜುನ್ ಸಿಂಗ್, ಇವರನ್ನೂ ಭೇಟಿ ಮಾಡಲಿದ್ದಾರೆ. ಆದರೆ ಪ್ರಧಾನಿ ಮನಮೋಹನ್ ಸಿಂಗ್,ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿಯವರನ್ನು ಈಗಾಗಲೇ ಭೇಟಿಯಾಗಿರುವುದಾಗಿ ತಿಳಿಸಲಾಗಿದೆ.
ಮತ್ತಷ್ಟು
ನಂದಿಗ್ರಾಮ್‌ನಲ್ಲಿ ಬಾಂಬ್ಎಸೆತ, ಘರ್ಷಣೆ
ಮುಲಾಯಂಗೆ ಹೊಣೆ: ನಾಳೆ ತೃ-ರಂಗ ಸಭೆ
ಜೈಲಿಂದ ಪಾರಾದ ಭಯೋತ್ಪಾದಕ- ಸೆರೆ
ರಾಷ್ಟ್ರಪತಿ ಚುನಾವಣೆ-ಎಸ್‌ ಪಿ ಸಭೆ
ರಬ್ಬರ್‌ಸ್ಟಾಂಪ್‌ ರಾಷ್ಟ್ರಪತಿಯಾಗಲಾರೆ- ಪ್ರತಿಭಾ
ಬಾಹ್ಯಾಕಾಶದಲ್ಲಿ ಸುನಿತಾ ದಾಖಲೆ