ಗುಜ್ಜಾರ ಸಮುದಾಯದವರ ಮೀಸಲಾತಿ ಬೇಡಿಕೆಗೆ ಸಂಬಂಧಿಸಿ ಸಂಭವಿಸಿದ ದೆಹಲಿ ಬಂದ್, ಇತರ ಹಿಂಸಾಚಾರ ಘಟನೆಗಳ ವೇಳೆ ಸಂಭವಿಸಿದ ಸಾರ್ವಜನಿಕ ಆಸ್ತಿಪಾಸ್ತಿ ಹಾನಿಯ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಸುಪ್ರೀಕೊರ್ಟ್ ಇಂದು ಎರಡು ಸಮಿತಿಗಳನ್ನು ನೇಮಿಸಿದೆ.
ಇಂತಹ ಪ್ರಕರಣಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್ ದೇಶದ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ನೊಟೀಸ್ ಜಾರಿಗೊಳಿಸಿ, ಮೂರು ವಾರಗಳೊಳಗಾಗಿ ಸಮಗ್ರ ವರದಿ ನೀಡಲು ತಿಳಿಸಲಾಗಿದೆ.
ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ತಮ್ಮ ವ್ಯಾಪ್ತಿಯಲ್ಲಿ ಸಂಭವಿಸಿದ ಘಟನೆಗಳು, ಆಸ್ತಿಪಾಸ್ತಿ ಹಾನಿಕುರಿತಂತೆ ಎಷ್ಟು ಪ್ರಕರಣ ದಾಖಲಿಸಲಾಗಿದೆ, ಎಷ್ಟರಲ್ಲಿ ಶಿಕ್ಷೆ ಮತ್ತು ದಂಡ ವಿಧಿಸಲಾಗಿದೆ ಎಂಬ ವಿವರಣೆ ನೀಡಲು ಆದೇಶಿಸಲಾಗಿದೆ.ಸಿರುವ ಪ್ರಕರಣಗಳು
ಗುಜ್ಜಾರ್ ಪ್ರಕರಣವಷ್ಟೇ ಅಲ್ಲ, ದೇಶದಾದ್ಯಂತ ಆಗಾಗ ದೊಂಬಿ , ಮಾನವಹತ್ಯಾಕಾಂಡ, ಸಾರ್ವಜನಿಕ ಆಸ್ತಿಪಾಸ್ತಿ ನಾಶ ನಡೆಯುತ್ತಲೇ ಇರುತ್ತದೆ. ಇಂತಹ ಸಂದರ್ಭಗಳು ಆವರ್ತಿಸಿದಾಗ, ಜನತೆಗೆ ಇಲ್ಲಿ ಸರ್ಕಾರಗಳಿವೆಯೇ ಎಂಬ ಕಳವಳವನ್ನು ನಿವಾರಿಸಲು ನ್ಯಾಯಾಲಯ ಗುಜ್ಜಾರ್ ಪ್ರಕರಣದಲ್ಲಿ ಪ್ರಥಮತಃ ಸಮಿತಿ ನೇಮಿಸಿದೆ ಎಂದು ಸರ್ವೋಚ್ಛನ್ಯಾಯಾಲಯ ತಿಳಿಸಿದೆ.
ಇದೊಂದು ರಾಷ್ಟ್ರ ಮಟ್ಟದ ಪ್ರಕರಣ ಎಂದು ವಿಶೇಷಿಸಿರುವ ಸರ್ವೋಚ್ಛ ನ್ಯಾಯಾಲಯವು, ಗುಜ್ಜಾರರಿಂದ ನಡೆದ ದೆಹಲಿ ಬಂದ್, ಇನ್ನಿತರ ಸಾರ್ವಜನಿಕ ಸೊತ್ತು ನಾಶವನ್ನು ಸುಪ್ರೀಂ ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ.
|