ನಂದಿಗ್ರಾಮ ಬಾಂಬ್ ಎಸೆತ ಹಾಗೂ ಘರ್ಷಣೆಗಳ ಹಿನ್ನೆಲೆ ಜ್ವಲಂತವಾಗಿರುವಂತೆಯೇ ಪಶ್ಚಿಮಬಂಗಾಳದ ಆಡಳಿತಾರೂಢ ಎಡಪಂಥೀಯ ಸಿಪಿಐಂ ಪಕ್ಷದ ರಾಜ್ಯಸಮಿತಿ ಸಭೆಯು ರಾಜ್ಯರಾಜಧಾನಿಯಲ್ಲಿ ಇಂದು ಜರುಗುತ್ತಿದೆ.
ಸಭೆಯಲ್ಲಿ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ, ಸಿಪಿಐಎಂ ರಾಜ್ಯ ಕಾರ್ಯದರ್ಶಿ ಬಿಮಾನ್ ಬೋಸ್, ಹಿರಿಯ ಧುರೀಣ ಬಿನಾಯ್ ಕೋನಾರ್ ಮುಂತಾದವರು ನಾಯಕತ್ ನೀಡಿದ್ದಾರೆ.
ಕಳೆದೆರಡು ದಿನಗಳಿಂದ ನಂದಿಗ್ರಾಮ ಘಟನಾವಳಿಗಳಿಂದ ಸಿಪಿಐಎಂ ಪಕ್ಷದ ಪ್ರತಿಷ್ಠೆಗೆ ಕುಂದುಂಟಾಗಿರುವುದರಿಂದ ಪಕ್ಷ ಗಂಭೀರ ಚಿಂತನೆ ನಡೆಸಿದೆ. ಭಾನುವಾರ ಸಂಭವಿಸಿದ ನಂದಿಗ್ರಾಮ ಘಟನಾವಳಿಗಳಲ್ಲಿ ಪತ್ರಕರ್ತರು ಹಾಗೂ ಪೊಲೀಸರತ್ತ ಸಿಪಿಐಎಂ ಕಾರ್ಯಕರ್ತರು ಬಾಂಬ್ ಎಸೆದ ಪ್ರಕರಣ ಸಂಭವಿಸಿತ್ತು.
ನಂದಿ ಗ್ರಾಮದಲ್ಲಿ ವಿಶೇಷ ಆರ್ಥಿಕ ವಲಯ ಯೋಜನೆ ಸ್ಥಾಪಿಸಲು ರೈತರ ಭೂಮಿ ಸ್ವಾಧೀನಗೊಂಡಿದೆ. ಇದಕ್ಕೆ ರಾಷ್ಟ್ರೀಯ ಮಾನದಂಡದಂತೆ ಪ್ರತಿಫಲ ಆಗ್ರಹಿಸಿ ಸಂತ್ರಸ್ತರು ಹೋರಾಟ ನಡೆಸಿದ್ದರು. ಈ ವಿಷಯಗಳೆಲ್ಲಾ ಚರ್ಚೆಗೆ ಗ್ರಾಸವಾಗುವ ಸಂಭವವಿದೆ.
|