ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
'ಪರ್ಧಾ' ಸುಳಿಯಲ್ಲಿ ಪ್ರತಿಭಾಪಾಟೀಲ್
webdunia
ಮುಸ್ಲೀಮರಲ್ಲಿ ವ್ಯಾಪಕವಾಗಿರುವ ಮುಖಾವರಣ (ಪರ್ಧಾ)ಧರಿಸುವ ಸಂಪ್ರದಾಯವನ್ನು ಕೊನೆಗೊಳಿಸಬೇಕು, ಮುಸ್ಲೀಂ ಮಹಿಳೆಯರಲ್ಲಿರುವ ಪರ್ಧಾ ಪದ್ಧತಿಯನ್ನು ಕೊನೆಗೊಳಿಸಬೇಕಾಗಿದೆ ಎಂಬುದಾಗಿ ಯುಪಿಎ ರಾಷ್ಟ್ರಪತಿ ಅಭ್ಯರ್ಥಿ ಪ್ರತಿಭಾ ಪಾಟೀಲ್‌ ನೀಡಿರುವ ಹೇಳಿಕೆ ವಿವಾದವಾಗುತ್ತಿದೆ.

ರಾಜಸ್ತಾನದ ರಾಜ್ಯಪಾಲ ಎಂಬ ನೆಲೆಯಲ್ಲಿ ಪ್ರತಿಭಾಪಾಟೀಲ್ ಅವರು ಈ ಹೇಳಿಕೆ ನೀಡಿದ್ದರು. ಉದಯಪುರದಲ್ಲಿ ನೀಡಿರುವ ಹೇಳಿಕೆಯಂತೆ , ರಾಜಸ್ತಾನದಲ್ಲಿ ಮಹಿಳೆಯರು ಇನ್ನೂ ಮುಖಾವರಣ-ಪರ್ಧಾ ಧರಿಸುತ್ತಾರೆ. ಮೊಗಲರ ಆಳ್ವಿಕೆ ಕಾಲದಲ್ಲಿ ಇದು ಜಾರಿಗೆ ಬಂತು.

ನಮ್ಮ ಮಹಿಳೆಯರನ್ನು ಪುರುಷರಿಂದ ಸಂರಕ್ಷಿಸಲು ಪರ್ಧಾ ವಿಧಾನ ಜಾರಿಗೆ ಬಂತು. ಆ ಬಳಿಕ ಕಾಲಾಂತರದಲ್ಲಿ ಮೊಗಲ ರಾಜ್ಯಭಾರ ಕೊನೆಗೊಂಡಿತು. ಭಾರತ ಸ್ವಾತಂತ್ರ್ಯಗಳಿಸಿತು. ಆದರೂ ನಮ್ಮ ಮಹಿಳೆಯರು ಇನ್ನೂ ಪರ್ಧಾ ಬಳಕೆ ನಿಲ್ಲಿಸಿಲ್ಲ. ಇದನ್ನು ನಿಲ್ಲಿಸಬೇಕು. ನಾವು ಸಮಯದೊಂದಿಗೆ ಬದಲಾಗಬೇಕು- ಇದು ಪ್ರತಿಭಾ ಹೇಳಿಕೆಯ ಸಾರಾಂಶ.

ಪ್ರತಿಭಾ ಪಾಟೀಲರ ಹೇಳಿಕೆ ಕೋಮುವಾದಿಗಳೆಂದು ಬಿಜೆಪಿಗಳನ್ನು ಟೀಕಿಸುತ್ತಿರುವ ಹಾಗೂ ಅಲ್ಪಸಂಖ್ಯಾತರನ್ನು ಮಹಿಳೆಯರನ್ನು ಓಲೈಸುತ್ತಿರುವ ಕಾಂಗ್ರೆಸ್ ಮತ್ತು ಎಡಪಂಥೀಯ ಒಕ್ಕೂಟವಾದ ಯುಪಿಎ ನೇತೃತ್ವವನ್ನು ಇಕ್ಕಟ್ಟಿಗೆ ಸಿಲುಕಿದೆ.

ಪ್ರತಿಭಾ ಅವರು ಪರ್ಧಾ ಕುರಿತು ವಿರೋಧ ವ್ಯಕ್ತ ಪಡಿಸಿ, ಮಹಿಳಾ ಕ್ರಾಂತಿಯ ಉದ್ದೇಶ ಹೊಂದಿದ್ದರಾದರೂ, ಮೊಗಲರ ಕಾಲವನ್ನು ಉಲ್ಲೇಖಿಸಿ ಮೊಗಲ ಆಕ್ರಮಣಕಾರರಿಂದ ನಮ್ಮ ಮಹಿಳೆಯರನ್ನು ರಕ್ಷಿಸಲು ಪರ್ಧಾ ಬಳಕೆಗೆ ಬಂತು ಎಂಬರ್ಥದ ಹೇಳಿಕೆ ನೀಡಿರುವುದು ಮಹಿಳೆಯರನ್ನು ಮತ್ತು ಇತಿಹಾಸಜ್ಞರ ಅಸಹನೆಗೆ ಪಾತ್ರವಾಗಿದೆ. ಅಲ್ಪಸಂಖ್ಯಾತರ ಅತೃಪ್ತಿಗೂ ಪಾತ್ರವಾಗುವಂತಾಗಿದೆ.

ಮಹಿಳೆಗೆ ರಾಷ್ಟ್ರಪತಿ ಹುದ್ದೆ ನೀಡಿ ಸಾರ್ವತ್ರಿಕವಾಗಿ ಉತ್ತಮ ಅಭಿಪ್ರಾಯಗಳಿಸಬೇಕೆಂದು ಕಾಂಗ್ರೆಸ್ ಪ್ರಯತ್ನಿಸುತ್ತಿದ್ದರೆ, ಆ ಹುದ್ದೆಗೆ ಆಯ್ಕೆಯಾದ ಮಹಿಳೆ ಎಂಬ ಹುಮ್ಮಸ್ಸಿನಲ್ಲಿರುವ ಪ್ರತಿಭಾ ಅವರು ಅತ್ಯುನ್ನತ ಪದವಿ-ಅಧಿಕಾರಕ್ಕೇರುವ ಮುನ್ನವೇ ವಿವಾದಾಸ್ಪದ ಹೇಳಿಕೆಯ ಸುಳಿಗೆ ಸಿಕ್ಕುವಂತಾಗಿದೆ.
ಮತ್ತಷ್ಟು
ತೃತೀಯರಂಗದಿಂದ ಅಬ್ದುಲ್‌ ಕಲಾಂ ಆಯ್ಕೆ
ನಂದಿಗ್ರಾಮ- ಸಿಪಿಐಂ ರಾಜ್ಯ ಸಭೆ
ರಾಜ್ಯಗಳಿಗೆ ನೋಟಿಸ್- 'ಗುಜ್ಜಾರ' 2ಸಮಿತಿ
ಇಂದು ತೃ-ರಂಗ ಮಹತ್ವದ ಸಭೆ
ಜೂ.23- ಪ್ರತಿಭಾ ನಾಮಪತ್ರ ಸಲ್ಲಿಕೆ
ನಂದಿಗ್ರಾಮ್‌ನಲ್ಲಿ ಬಾಂಬ್ಎಸೆತ, ಘರ್ಷಣೆ