ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಕಲಾಂ ಕೇಂದ್ರ ಬಿಂದು,ಶಿವಸೇನೆ ಮೌನ
webdunia
ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರಿಗೆ ಇನ್ನೊಂದು ಅವಧಿಗೆ ಅವಕಾಶ ನೀಡಬೇಕು, ಅವರನ್ನೇ ಸರ್ವಸಮ್ಮತ ಅಭ್ಯರ್ಥಿಯಾಗಿ ಎಲ್ಲಾ ಪಕ್ಷಗಳು ಆಯ್ಕೆ ಮಾಡಬೇಕೆಂದು ತೃತೀಯ ರಂಗದ ಹೇಳಿಕೆಯೊಂದಿಗೆ ರಾಷ್ಟ್ರಪತಿ ಚುನಾವಣಾ ಕಣ ರಂಗೇರಿದೆ.

ಕಾಂಗ್ರೆಸ್ ಎಡರಂಗ ನಏತೃತ್ವದ ಯುಪಿಎ ಒಕ್ಕೂಟ ರಾಜಸ್ತಾನದ ರಾಜ್ಯಪಾಲ ಪ್ರತಿಭಾ ಪಾಟೀಲ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟಗಳು ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್ ಅವರನ್ನು ಪಕ್ಷೇತರ ಅಭ್ಯರ್ಥಿಯಾಗಿ ಬೆಂಬಲಿಸುವ ನಿರ್ಧಾರ ತಾಳಿದ್ದುವು.

ಈ ನಡುವೆ ತೃತೀಯ ರಂಗ ಸೋಮವಾರದಂದು ಡಾ. ಕಲಾಂ ಅವರಿಗೆ ಅವಕಾಶ ನೀಡಬೇಕೆಂಬ ವಾದ ಮುಂದಿಟ್ಟಿರುವುದರಿಂದ ಪ್ರಕರಣಕ್ಕೆ ಹೊಸ ತಿರುವು ಬಂದಿದೆ. ಎನ್‌ಡಿಎ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಶೆಕಾವತ್ ಅವರು, ಕಲಾಂ ಸ್ಪರ್ಧಿಸುವುದಾದರೆ ತಾನು ಹಿಂದೆ ಸರಿಯುವುದಾಗಿ ತಿಳಿಸಿರುವುದು ಗಮನಾರ್ಹವಾಗಿದೆ.

ಆದರೆ, ಇಷ್ಟೆಲ್ಲಾ ಹೇಳಿಕೆ ಮುಂದುವರಿದಿರುವಂತೆಯೇ ಡಾ. ಕಲಾಂ ಇದುವರೆಗೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಅವರಿಗೆ ಆಸಕ್ತಿ ಇದೆ ಎಂದು ನಿಕಟವರ್ತಿ ಮೂಲಗಳು ಹೇಳಿವೆ. ಆದಾಗ್ಯೂ ಸಾರ್ವತ್ರಿಕ ಬೆಂಬಲ ಇಲ್ಲವಾದಲ್ಲಿ ಅವರು ಒಪ್ಪಿಕೊಳ್ಳಲಾರರು.

ರಾಷ್ಟ್ರಪತಿ ಚುನಾವಣಾ ಕಣ ಇಷ್ಟೆಲ್ಲಾ ಕುತೂಹಲ ಕಾರಿ ಘಟ್ಟ ತಲುಪಿದ್ದರೂ ಮಹಾರಾಷ್ಟ್ರದ ಪ್ರಬಲ ಪಕ್ಷ ಶಿವಸೇನೆ ಮೌನ ವಹಿಸಿದೆ. ಒಂದೆಡೆ ಬಿಜೆಪಿ ಅಭ್ಯರ್ಥಿಯ ಒತ್ತಡ, ಇನ್ನೊಂದೆಡೆ ಮರಾಠಿ ಮೂಲದ ಪ್ರತಿಭಾ ಪಾಟೀಲ್ ಇದ್ದು, ಯಾರನ್ನು ಬೆಂಬಲಿಸಬೇಕೆಂಬ ಗೊಂದಲದಲಲಿರುವಂತಿದೆ. ಆದರೆ ಕಲಾಂ ಅವರನ್ನು ಬೆಂಬಲಿಸುವರೇ ಎಂಬುದೂ ತಿಳಿದು ಬಂದಿಲ್ಲ.

ತನ್ಮಧ್ಯೆ ಈಗ ಕಲಾಂ ಅವರ ಹೇಳಿಕೆ ನಿರ್ಣಾಯಕವಾಗಿದ್ದು, ತೃತೀಯರಂಗ ಮುಖಂಡರು ಜೂ.20ರಂದು ಅವರನ್ನು ಭೇಟಿಯಾಗಿ ಸ್ಪರ್ಧೆಗೆ ವಿನಂತಿಸುವರೆಂದು ತಿಳಿದುಬಂದಿದೆ.
ಮತ್ತಷ್ಟು
ಗಲಭೆಗೆ116 ಬಲಿ - 14 ಮಂದಿ ತಪ್ಪಿತಸ್ಥರು
'ಪರ್ಧಾ' ಸುಳಿಯಲ್ಲಿ ಪ್ರತಿಭಾಪಾಟೀಲ್
ತೃತೀಯರಂಗದಿಂದ ಅಬ್ದುಲ್‌ ಕಲಾಂ ಆಯ್ಕೆ
ನಂದಿಗ್ರಾಮ- ಸಿಪಿಐಂ ರಾಜ್ಯ ಸಭೆ
ರಾಜ್ಯಗಳಿಗೆ ನೋಟಿಸ್- 'ಗುಜ್ಜಾರ' 2ಸಮಿತಿ
ಇಂದು ತೃ-ರಂಗ ಮಹತ್ವದ ಸಭೆ