ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಮಂಬೈಯಲ್ಲೀಗ ಬಂದೋಬಸ್ತ್ ಪರ್ವ!
webdunia
ಮುಂಬೈ ಟ್ರೇಡ್ ಸೆಂಟರ್‌ಗೆ ಬಾಂಬ್‌ಸ್ಫೋಟ ಬೆದರಿಕೆ ಬಂದಿರುವ ಬೆನ್ನಲ್ಲೇ ಇದೀಗ ಹೆಸರಾಂತ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸುರಕ್ಷತೆಗೆ ಬೆದರಿಕೆ ಹಾಕಲಾಗಿದೆ. ಬಿಗು ಪಹರೆ ಏರ್ಪಡಿಸಲಾಗಿದೆ.

ಭಾನುವಾರ ಮುಂಬೈಯ ವಿಶ್ವ ವ್ಯಾಪಾರ ಕೇಂದ್ರ(ವರ್ಲ್ಡ್ ಟ್ರೇಡ್ ಸೆಂಟರ್)ರನ್ನು ಸ್ಫೋಟಿಸುವುದಾಗಿ ಉಗ್ರಗಾಮಿ ಸಂಘಟನೆಗಳ ಹೆಸರಲ್ಲಿ ಬೆದರಿಕ ಕರೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಭಾರೀ ಭದ್ರತೆ, ಕಟ್ಟೆಚ್ಚರದ ಕಾವಲು ಒದಗಿಸಲಾಗಿತ್ತು.

ಇದೀಗ ಸೆಂಟ್ರಲ್ ಮುಂಬೈಯಲ್ಲಿರುವ ಪ್ರಾಚೀನ ಹಾಗೂ ಭಕ್ತಾದಿಗಳ ದಟ್ಟಣೆ ಇರುವ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಸರದಿ. ದೇವಸ್ಥಾನ ಹಾಗೂ ಭಕ್ತಾದಿಗಳ ಸಂರಕ್ಷಣೆಗಾಗಿ ಸಶಸ್ತ್ರ ಪೋಲೀಸರು ಬಿಗುಪಹರೆ ಏರ್ಪಡಿಸಲಾಗಿದೆ.

ದೇವಸ್ಥಾನ ಪ್ರಾಕಾರದ ಆಯಕಟ್ಟಿನ ಭಾಗದಲ್ಲಿ ಲೋಹ ಪತ್ತೆ ಹಾಗೂ ಬಾಂಬ್ ಪತ್ತೆ ಸಲಕರಣೆಗಳನ್ನು ಏರ್ಪಡಿಸಲಾಗಿದೆ.
ಮತ್ತಷ್ಟು
ಕಲಾಂ ಕೇಂದ್ರ ಬಿಂದು,ಶಿವಸೇನೆ ಮೌನ
ಗಲಭೆಗೆ116 ಬಲಿ - 14 ಮಂದಿ ತಪ್ಪಿತಸ್ಥರು
'ಪರ್ಧಾ' ಸುಳಿಯಲ್ಲಿ ಪ್ರತಿಭಾಪಾಟೀಲ್
ತೃತೀಯರಂಗದಿಂದ ಅಬ್ದುಲ್‌ ಕಲಾಂ ಆಯ್ಕೆ
ನಂದಿಗ್ರಾಮ- ಸಿಪಿಐಂ ರಾಜ್ಯ ಸಭೆ
ರಾಜ್ಯಗಳಿಗೆ ನೋಟಿಸ್- 'ಗುಜ್ಜಾರ' 2ಸಮಿತಿ