ರಾಜೀವ್ ಗಾಂಧಿ ಪುತ್ರ ಸಂಸದ ರಾಹುಲ್ ಗಾಂಧಿ ಇಂದು ತಮ್ಮ 37ನೇ ಜನ್ಮದಿನಾಂಕವನ್ನು ಆಚರಿಸಿದರು. ನೆಹರೂ ಕುಟುಂಬದ ಸದಸ್ಯ, ಕಾಂಗ್ರೆಸ್ ಪಕ್ಷದ ಭವಿಷ್ಯದ ಧುರೀಣ ಎಂಬಿತ್ಯಾದಿ ಕಾರಣಗಳಿಂದಾಗಿ ಇವರ ಜನ್ಮದಿನೋತ್ವಕ್ಕೆ ಹೆಚ್ಚಿನ ಮಹತ್ವವಿದೆ.
ನವದೆಹಲಿಯ ಹತ್ತನೇ ಜನಪಥದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಜನ್ಮದಿನಾಚರಣೆಯನ್ನು ಸಂಭ್ರಮ ದಿಂದ ಆಚರಿಸಿದರು. ಬಾಜಾ ಭಜಂತ್ರಿ, ವಿಶೇಷ ಪ್ರಾರ್ಥನೆ ಹಾಗೂ ಸಿಹಿ ತಿಂಡಿಗಳ ವಿತರಣೆ ಇತ್ಯಾದಿ ಕಾರ್ಯಕ್ರಮಗಳೂ ಜರುಗಿದುವುದು.
ಹೈದರಾಬಾದಿನಲ್ಲಿ ಪುಟಾಣಿಗಳು, ಶಾಲಾಮಕ್ಕಳು ರಾಹುಲ್ ಜನ್ಮದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದರು, ರಾಹುಲ್ ಮುಖವಾಡವನ್ನು ತೊಟ್ಟು ಖುಷಿಪಟ್ಟರು. ಗಾಂಧಿಭವನ್‌ದಲ್ಲಿ ಎನ್‌ಎಸ್‌ಯುಐ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
|