ರಾಜ್ಯಸಭೆಯ ಮಾಜಿ ಉಪಾಧ್ಯಕ್ಷರಾಗಿದ್ದ ನಜ್ಮಾ ಹೆಪ್ತುಲ್ಲಾ ಅವರ ಸಾಮಾಜಿಕ ಜೀವನದ ವಿಶೇಷ ಸಾಧನೆಯನ್ನು ಗಮನಿಸಿ, ಇಂದು 'ವೀರಾಂಗನಾ ಸಮ್ಮಾನ್ 2007' ಪುರಸ್ಕಾರ ನೀಡಿ ಗೌರವಿಸಲಾಗಿದೆ.
ಪ್ರಸ್ತುತ ಪ್ರಶಸ್ತಿಯನ್ನು ಬಿಜೆಪಿ ಹಿರಿಯ ಮುಖಂಡ ಎಲ್ ಕೆ ಅಡ್ವಾನಿ ಪ್ರದಾನ ಮಾಡಿದರು. ಪ್ರಸ್ತುತ ಪ್ರಶಸ್ತಿಯನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡಿ ಹುತಾತ್ಮರಾದ ಧೀರ ಮಹಿಳೆ ಝಾನ್ಸಿ ರಾಣಿ ಲಕ್ಷ್ಮೀ ಬಾಯಿ ಅವರ ಸ್ಮರಣಾರ್ಥ ನೀಡಲಾಗುತ್ತಿದೆ.
ಪ್ರಸ್ತುತ ಸಮಾರಂಭದಲ್ಲಿ ಹುತಾತ್ಮ ಚಂದ್ರ ಶೇಖರ ಆಝಾದ್ ಅವರ ಸ್ಮರಣಾರ್ಥ ನೀಡಲಾಗುವ ಪ್ರಶಸ್ತಿಯನ್ನು ಜಶ್ಪುರದ ಅಖಿಲ ಭಾರತೀಯ ವನವಾಸಿ ಕಲ್ಯಾಣ ಆಶ್ರಮ ಕೇಂದ್ರಕ್ಕೆ ನೀಡಲಾಗಿದ್ದು, ವಿಶೇಷ ಸಾಧನೆಯನ್ನು ಅನುಲಕ್ಷ್ಯಿಸಿ ಈ ಪುರಸ್ಕಾರ ನೀಡಲಾಗಿದೆ. ಪುರಸ್ಕಾರವು 1.50 ಲಕ್ಷ ರೂ. ಸಹಿತ ಪ್ರಶಸ್ತಿ ಪತ್ರ ಫಲಕಗಳಿರುತ್ತವೆ.
ಪ್ರಸ್ತುತ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ , ಸಚಿವ ನರೇಂದ್ರ ಸಿಂಗ್ ಥೋಮಾರ್ ಮತ್ತಿತರರು ಉಪಸ್ಥಿತರಿದ್ದರು ಎಂದು ತಿಳಿಸಲಾಗಿದೆ.
|