ರಾಷ್ಟ್ರಪತಿ ಆಯ್ಕೆಗಾಗಿ ಚುನಾವಣಾರಂಗ ಬಿಸಿಯೇರುತ್ತಿರುವಂತೆಯೇ ಇಂದು ಪ್ರಧಾನ ಮಂತ್ರಿ ಮನ್‌ಮೋಹನ್ ಸಿಂಗ್ ರಾಷ್ಟ್ರಪತಿಯವರ್ನು ಭೇಟಿಯಾಗಲಿದ್ದಾರೆ.
ತೃತೀಯರಂಗದ ಮುಖಂಡರು ರಾಷ್ಟ್ರಪತಿ ಡಾ.ಎಪಿಜೆ ಕಲಾಂ ಅವರನ್ನು ಎರಡನೇ ಬಾರಿಗೆ ಆರಿಸುವ ನಿರ್ಧಾರ ಪ್ರಕಟಿಸಿರುವಂತೆಯೇ, .ಯುಪಿಎ ಸರ್ಕಾರದ ಮುಖಂಡ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಅವರು ರಾಷ್ಟ್ರ ಪತಿ ಅವರನ್ನು ಭೇಟಿಯಾಗುತ್ತಿರುವುದು ವಿಶೇಷ ಮಹತ್ವ ಪಡೆದಿದೆ.
ರಾಷ್ಟ್ರ ಪತಿ ಭವನದ ಮೂಲಗಳು ತಿಳಿಸಿರುವಂತೆ ಇಂದು ಸಂಜೆ 5 ಗಂಟೆಗೆ ಪ್ರಧಾನಿ ಹಾಗೂ ರಾಷ್ಟ್ರಪತಿ ಅವರ ಭೇಟಿ ನಡೆಯಲಿದೆ. ಇವರಿಬ್ಬರ ಮಾತುಕತೆಯ ಸಮಯ ನಿಗದಿಯಾಗಿದೆಯೇ ವಿನಃ ಅಜೆಂಡಾ ಲಭ್ಯವಾಗಿಲ್ಲ.
ತನ್ಮಧ್ಯೆ, ತೃತೀಯರಂಗದ ನಾಯಕರು ರಾಷ್ಟ್ರಪತಿಯವರನ್ನು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ವಿನಂತಿಸಲು ನಾಳೆ ಭೇಟಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಸ್ತುತ ಪ್ರಧಾನಿ ಭೇಟಿ ವಿಶೇಷ ಕುತೂಹಲ ಕೆರಳಿಲಿಸಿದೆ.
|