ಬಂಧಿಖಾನೆಗಳ ಸುಧಾರಣೆ ಹಾಗೂ ನಿವಾಸಿಗಳಿಗೆ ಅಗತ್ಯ ಸ್ಥಳಾವಕಾಶ ನೀಡುವ ಉದ್ದೇಶದಿಂದ ತಿಹಾರ್ ಜೈಲು ಅಧಿಕಾರಿಗಳು 600 ಬಂಧಿಗಳನ್ನು ಬಿಡುಗಡೆ ಮಾಡಿದ್ದಾರೆ.
ದೆಹಲಿ ಉಚ್ಛನ್ಯಾಯಾಲಯ ಬಂಧಿಖಾನೆ ಅಧಿಕಾರಿಗಳಿಗೆ ನೀಡಿರುವ ಆದೇಶದಂತೆ ಜೈಲಿನೊಳಗಡೆ ಜನಸಂಖ್ಯೆ ತಗ್ಗಿಸಲು ಸೂಚಿಸಲಾಗಿತ್ತು. ಇದರನ್ವಯ 600 ಮಂದಿಯನ್ನು ಬಿಡುಗಡೆ ಮಾಡಲಾಗಿದೆ.
ಸಣ್ಣಪುಟ್ಟಅಪರಾಧಗಳು, ಕಾನೂನು ಉಲ್ಲಂಘನೆ, ಇತ್ಯಾದಿಗಳಿಗಾಗಿ ತಿಹಾರ್ ಜೈಲು ಸೇರಿದ ಕ್ಷುಲ್ಲಕ ಪ್ರಕರಣಗಳ ಆರೋಪಿಗಳನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ನ್ಯಾಯಾಲಯದ ಸೂಚನೆಯಂತೆ ಜೈಲಿನೊಳಗೆ ನೆಲೆಸುವವರಿಗೆ ಅಗತ್ಯ ಸ್ಥಳಾವಕಾಶ ಮಾಡಿಕೊಡಲಾಗಿದೆ.
|