ಮಹಿಳೆಯರು ಮುಖಾವರಣ(ಪರ್ಧಾ)ಧರಿಸಲು ಮುಸಲ್ಮಾನ ಆಕ್ರಮಣಕಾರರು ಕಾರಣ ಎಂಬರ್ಥದ ಹೇಳಿಕೆಯನ್ನು ರಾಷ್ಟ್ರಪತಿ ಅಭ್ಯರ್ಥಿ ಪ್ರತಿಭಾ ಪಾಟೀಲ್ ವಾಪಸ್ ಪಡೆಯಬೇಕು, ಇಲ್ಲವಾದಲ್ಲಿ ತಾವು ಮತಚಲಾಯಿಸುವುದಿಲ್ಲ ಎಂಬುದಾಗಿ ಮುಸ್ಲೀಂ ಸಂಘಟನೆಗಳು ಎಚ್ಚರಿಸಿವೆ.
ವಿವಿಧ ಮುಸ್ಲೀಂ ಸಂಘಟನೆಗಳ ಕ್ರಿಯಾ ಸಮಿತಿ (ಜೆಎಕೆ)ಯ ಸಭೆಯಲ್ಲಿ ಈ ನಿರ್ಧಾರ ಸ್ವೀಕರಿಸಲಾಗಿದೆ. ಪ್ರತಿಭಾ ಪಾಟೀಲರ ಹೇಳಿಕೆಯನ್ನು ನಾವು 'ಇತಿಹಾಸದ ತಿರುಚುವಿಕೆ' ಎಂದಿರುವ ಸಂಘಟನೆಗಳು, ಹೇಳಿಕೆ ವಾಸ್ತವಕ್ಕೆ ವಿರುದ್ಧ ಹಾಗೂ ಸ್ವೀಕಾರಾರ್ಹವಲ್ಲ ಎಂದಿದ್ದಾರೆ.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಂಸದ ಹಾಗೂ ಆಲ್ ಇಂಡಿಯಾ ಮಜ್ಲಿಸ್ ಇತೆಹಾದುಲ್ ಮುಸ್ಲಿಮೀನ್(ಎಂಐಎಂ) ಸಂಘಟನೆಯ ಅಧ್ಯಕ್ಷ ಸುಲ್ತಾನ್ ಸಲಾಹುದ್ದೀನ್ ಒವೈಸಿ , ಪ್ರತಿಭಾ ಪಾಟೀಲ್ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಬೇಕೆಂದಿದ್ದಾರೆ.
ಆದರೆ ಇತ್ತೀಚೆಗಷ್ಟೇ ಕಾಂಗ್ರೆಸ್-ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ಸೋನಿಯಾರನ್ನು ಭೇಟಿ ಮಾಡಿದ್ ಸಲಾಹುದ್ದೀನ್ ಯುಪಿಎ ಅಭ್ಯರ್ಥಿಗೆ ತಮ್ಮ ಪಕ್ಷದ ಬೆಂಬಲವನ್ನು ಭರವಸೆ ನೀಡಿದ್ದರು. ಇದರ ಬೆನ್ನಲ್ಲೇ ಪ್ರಸ್ತುತ ವಿವಾದ ಸಂಭವಿಸಿದೆ.
|