ಪಶ್ಚಿಮ ಬಂಗಾಳದ ಸಿಂಗೂರಿನಲ್ಲಿ ಟಾಟಾಮೋಟಾರ್ಸ್ ಘಟಕಕ್ಕಾಗಿ ಭೂಮಿ ಒದಗಿಸಿದ ಸಂತ್ರಸ್ತರಿಗಾಗಿ ಸರ್ಕಾರ ಮಾದರಿ ಪರಿಹಾರ ಪುನರ್ವಸತಿ ಪ್ಯಾಕೇಜೆ ಜಾರಿಗೊಳಿಸಿದೆ.
ತನ್ಮಧ್ಯೆ, ತೃಣಮೂಲ ಕಾಂಗ್ರೆಸ್ ಪ್ರಸ್ತುತ ಪರಿಹಾರ-ಪುನರ್ವಸತಿ ಪ್ಯಾಕೇಜ್‌ನ್ನು ತಿರಸ್ಕರಿಸಿದೆ. ಸರ್ಕಾರ ರೈತರ ಪರವಾಗಿ ಸರಿಯಾಗಿ ಪ್ರತಿಕ್ರಿಯಿಸುವ ವರೆಗೆ ಹೊರಾಟ ಮುಂದುವರಿಸುವುದಾಗಿ ತಿಳಿಸಿದೆ.
ಪ್ರಸ್ತುತ ಪ್ಯಾಕೇಜ್‌ನಂತೆ ಸ್ಥಳಾಂತರಿತ ಸಂತ್ರಸ್ತ ರೈತರಿಗಾಗಿ ವೃತ್ತಿಪರ ತರಬೇತಿ ಕಾರ್ಯಕ್ರಮ, ನೌಕರಿ ಗುರುತಿಸಿ ಅವುಗಳಲ್ಲಿ ನೇಮಕ, ಸಾಮಾಜಿಕ ಆರ್ಥಿಕ ಪುನರ್ವತಿ ಸೌಲಭ್ಯಗಳನ್ನು ಒದಗಿಸಲಾಗುವುದು.
ಆದರೆ ತೃಣಮೂಲ ಕಾಂಗ್ರೆಸ್ ಬೇಡಿಕೆಯಂತೆ ಭೂಮಿಯನ್ನು ವಾಪಸ್ ನೀಡುವ ಪ್ರಶ್ನೆಯೇ ಇಲ್ಲ, ಸ್ವಾಧೀನ ಪಡಿಸಲಾಗಿರುವ ಜಮೀನನ್ನು ನಿರ್ದಿಷ್ಟ ಪಡಿಸಿದ ಉದ್ದೇಶಕ್ಕಾಗಿ ಬಳಸಲಾಗುವುದು ಎಂಬುದಾಗಿ ರಾಜ್ಯದ ಸಚಿವ ನಿರುಪಂ ಸೇನ್ ತಿಳಿಸಿದ್ದಾರೆ.
ಮಮತಾ ಹೇಳಿಕೆ: ತೃಣ ಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಪರಿಹಾರ ಪ್ಯಾಕೇಜ್ ಕುರಿತ ಅತೃಪ್ತಿ ವ್ಯಕ್ತ ಪಡಿಸಿ, ಇದನ್ನು ತಿರಸ್ಕರಿಸುವಂತೆ ಸಂತಸ್ತರಿಗೆ ಮನವಿ ಮಾಡಿದ್ದಾರೆ. ಸಿಂಗೂರ್, ನಂದಿಗ್ರಾಮ್ ಮತ್ತಿತರ ಕಡೆ ಕೃಷಿಭೂಮಿ ಸ್ವಾಧೀನ ಪಡಿಸುವುದರ ವಿರುದ್ಧ ಹೋರಾಟ ತೀವ್ರಗೊಳಿಸುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
|