ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಚಿಕೂನ್ ಗುನ್ಯ-9 ರಾಜ್ಯಗಳ ಸಭೆ
webdunia
ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗ ಚಿಕೂನ್‌ಗುನ್ಯಾ ಇದೀಗ ರಾಷ್ಟ್ರಾದ್ಯಂತ ಹರಡುತ್ತಿರುವ ಕಳವಳಕಾರಿ ವಿದ್ಯಮಾನದ ಹಿನ್ನೆಲೆಯಲ್ಲಿ ಕೇಂದ್ರ ಆರೋಗ್ಯ ಮಂತ್ರಿ ಅನ್ಬುಮಣಿ ರಾಮದಾಸ್ ಅವರು ನಾಳೆ 9 ರಾಜ್ಯಗಳ ಆರೋಗ್ಯ ಸಚಿವರ ತುರ್ತು ಸಭೆ ಹಮ್ಮಿಕೊಂಡಿದ್ದಾರೆ.

ನಾಳೆ ದೆಹಲಿಯಲ್ಲಿ ಜರುಗಲಿರುವ ರಾಜ್ಯಗಳ ಆರೋಗ್ಯ ಸಚಿವರುಗಳ ಸಭೆಗೆ ಆಂಧ್ರಪ್ರದೇಶ, ತಮಿಳ್ನಾಡು, ಕೇರಳ,ಕರ್ನಾಟಕ, ಪುದುಚೇರಿ, ಗುಜರಾತ್,ಮಹಾರಾಷ್ಟ್ರ, ಗೋವಾ ಹಾಗೂ ದೆಹಲಿ ರಾಜ್ಯಗಳ ಸಚಿವರನ್ನು ಆಹ್ವಾನಿಸಲಾಗಿದೆ.

ಚಿಕೂನ್‌ಗುನ್ಯಾ ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯಗಳು ಕೈಗೊಂಡಿರುವ ಹಾಗೂ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಸಚಿವರ ಸಭೆಯಲ್ಲಿ ಚರ್ಚಿಸಲಾಗುವುದು.

ದೇಶದಾದ್ಯಾಂತ ಇದುವರೆಗೆ 11,000 ಶಂಕಿತ ಪ್ರಕರಣಗಳು ದಾಖಲಾಗಿದ್ದರೆ, 400 ಮಂದಿ ರೋಗಬಾಧಿತರಾಗಿದ್ದಾರೆ. ಕೇಲವು ಸಾವುಗಳೂ ಸಂಭವಿಸಿದೆ. ಕೇರಳದಲ್ಲಿ ಇತ್ತೀಚೆಗೆ ಸಂಭವಿಸಿದ ಸಾವುಗಳೆಲ್ಲಾ ಚಿಕೂನ್‌ಗುನ್ಯಾ ಬಾಧಿತವಲ್ಲ, ವೈರಸ್‌ ಜ್ವರದಿಂದಾಗಿದೆ ಎಂದು ಹೇಳಲಾಗುತ್ತಿದೆ.

ದೇಶದಲ್ಲಿ ವೈರಸ್‌ ಜ್ವರಬಾಧೆ ಕಳವಳಕಾರಿಯಾಗಿದ್ದು, ಕಳೆದ 32ವರ್ಷಗಳಲ್ಲಿ ಇದೇ ಪ್ರಥಮಬಾರಿಗೆ ಇಂತಹ ರೋಗಕಾಣಿಸಿಕೊಂಡಿದೆ. ಪ್ರಸ್ತುತ ನಾಳೆ ಜರುಗಲಿರುವ ಸಭೆಯಲ್ಲಿ ರಾಜ್ಯಗಳಿಗೆ ಅಗತ್ಯವಾಗುವ ತಾಂತ್ರಿಕ , ಆರ್ಥಿಕ ನೆರವನ್ನೂ ಚರ್ಚಿಸಲಾಗುವುದು.
ಮತ್ತಷ್ಟು
ಸಿಂಗೂರು ಪ್ಯಾಕೇಜ್-ಮಮತಾ ಅತೃಪ್ತಿ
'ಜಯ' ರಹಿತ ತೃ-ರಂಗ ಕಲಾಂ ಭೇಟಿ
'ಜಯ' ರಹಿತ ತೃ-ರಂಗ ಕಲಾಂ ಭೇಟಿ
ತಿಹಾರ್‌ನಿಂದ 600 ಬಂಧಿಗಳ ಬಿಡುಗಡೆ
ಪ್ರತಿಭಾ ನಾಮಪತ್ರಸಲ್ಲಿಕೆಗೆ ಯುಪಿಎ ಸಿದ್ಧತೆ
ಇಂದು ಪ್ರಧಾನಿ-ರಾಷ್ಟ್ರಪತಿ ಭೇಟಿ