ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಅಸ್ಸೋಮ್ ನೆರೆಗೆ 1.5 ಲಕ್ಷ ಸಂತ್ರಸ್ತರು
webdunia
ಅಸ್ಸೋಮ್‌ನಲ್ಲಿ ಸಂಭವಿಸಿರುವ ಪ್ರಕೃತಿ ವಿಕೋಪ ಪ್ರವಾಹ ಹಾವಳಿಯಿಂದ ಸುಮಾರು 1.5 ಲಕ್ಷ ಮಂದಿ ಸಂತ್ರಸ್ತರಾಗಿದ್ದಾರೆ ಎಂದು ಸರ್ಕಾರಿವಲಯದ ಮಾಹಿತಿ ತಿಳಿಸಿದೆ.

ರಾಜ್ಯದ ಏಳು ಜಿಲ್ಲೆಗಳಲ್ಲಾಗಿ ನೆರೆಹಾವಳಿ ತೀವ್ರವಾಗಿದೆ. ರಾಜ್ಯದ ಜೀವನದಿಯಾದ ಬ್ರಹ್ಮಪುತ್ರ ,ಬರಾಕ್ ಹಾಗೂ ಉಪನದಿಗಳು ಅಪಾಯದ ಮಿತಿಯನ್ನು ಮೀರಿ ಹರಿಯುತ್ತಿರುವುದರಿಂದ ತೀರಪ್ರದೇಶದಾದ್ಯಂತ ನೆರೆನೀರು ಆವರಿಸಲ್ಪಟ್ಟಿದೆ.

ವಿವಿಧ ಜಿಲ್ಲೆಗಳ ಲಕೀಂಪುರ್,ಧೇಮಾಜಿ, ಸಿಬ್ಸಾಗರ್,ದಿಬ್ರೂಗರ್,ಕಚಾರ್,ಕರೀಂಗಂಜ್ ಹೈಲಾಕಂಡಿ ಜಿಲ್ಲೆಗಳ ಜನರು ರಾಷ್ಟ್ರೀಯ ಹೆದ್ದಾರಿಯಲ್ಲಿ ನೆಲೆಯೂರಿದ್ದಾರೆ. ಪ್ರದೇಶದಲ್ಲಿ ಗಡಿ ರಕ್ಷಣಾ ಪಡೆ ಕಾರ್ಯಾಚರಣೆ ನಡೆಸಿತ್ತಿದೆ.

ಬ್ರಹ್ಮಪತ್ರಾ ನದಿಯು ಅಪಾಯದ ಮಿತಿ ಮೀರಿ ಹರಿಯುತ್ತಿರುವುದರಿಂದ ಆಣೆಕಟ್ಟುಗಳು ಅಪಾಯದಲ್ಲಿವೆ. ಕರೀಂಗಂಜ್ ಜಿಲ್ಲೆಯ 42,386 ಜನಸಂಖ್ಯೆಯಿರುವ ಪ್ರದೇಶದಲ್ಲಿ ನೀರಿ ಅಣೆಕಟ್ಟನ್ನು ಮುಳುಗಿಸಿ ಹರಿಯುತ್ತಿದೆ.

ಕರೀಂಗಂಜ್ನ‌ಲ್ಲಿ ಹರಿಯುತ್ತಿರುವ ನದಿಗಳಾದ ಲಾಂಗಾಯಿ ಹಾಗೂ ಕುಶೀಯಾರಗಳು ಮೇರೆ ಮೀರಿ ಹರಿಯುತ್ತಿದ್ದು, ಪ್ರದೇಶದ ಜನತೆ ಅಪಾಯದಲ್ಲಿದ್ದಾರೆ.
ಮತ್ತಷ್ಟು
ಪಕ್ಷಗಳಲ್ಲಿ 'ಸ್ಥಿರತೆ' ಇದ್ದರೆ ಕಲಾಂ ಸ್ಪರ್ಧೆ-ನಾಯ್ಡು
ಚಿಕೂನ್ ಗುನ್ಯ-9 ರಾಜ್ಯಗಳ ಸಭೆ
ಸಿಂಗೂರು ಪ್ಯಾಕೇಜ್-ಮಮತಾ ಅತೃಪ್ತಿ
'ಜಯ' ರಹಿತ ತೃ-ರಂಗ ಕಲಾಂ ಭೇಟಿ
'ಜಯ' ರಹಿತ ತೃ-ರಂಗ ಕಲಾಂ ಭೇಟಿ
ತಿಹಾರ್‌ನಿಂದ 600 ಬಂಧಿಗಳ ಬಿಡುಗಡೆ