ಮುಖ್ಯಮಂತ್ರಿ ವಸುಂಧರಾ ರಾಜೆಯವರನ್ನು ದೇವತೆಯಾಗಿ ಚಿತ್ರಿಸಿ ಕ್ಯಾಲೆಂಡರ್ ಪ್ರಕಟಿಸಿದ ಬಿಜೆಪಿ ಶಾಸಕರಿಬ್ಬರ ವಿರುದ್ಧ ಪ್ರಕರಣ ದಾಖಲಿಸುವಂತೆ ಸ್ಥಳೀಯ ನ್ಯಯಾಲಯ ಪೊಲೀಸರಿಗೆ ಆದೇಶಿಸಿದೆ.
ಈ ವರ್ಷ ಹೊರತಂದ ಕ್ಯಾಲೆಂಡರ್‌ನಲ್ಲಿ ಪ್ರಸ್ತುತ ರಾಜಕಾರಣಿಗಳಿಗೆ ದೇವರುಗಳ ಚಿತ್ರಣ ನೀಡಿ ಪ್ರಕಟಿಸಲಾಗಿತ್ತು. ಈ ಪ್ರಕರಣವನ್ನು ಬಿಜೆಪಿ ಮುಖಂಡ ಜಸ್ವಂತ್ ಸಿಂಗ್ ಅವರ ಪತ್ನಿ ಶೀತಲ್ ಕನ್ವರ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು.
ಅರ್ಜಿಯನ್ನು ದಾಖಲಿಸಿದ ನ್ಯಾಯಾಲಯವು ಕ್ಯಾಲೆಂಡರ್ ಪ್ರಕರಣದಲ್ಲಿ ಶಾಮೀಲಾದ ಇಬ್ಬರು ಶಾಸಕರ ವಿರುದ್ಧ ಮೊಕದ್ದಮೆ ದಾಖಲಿಸಿ, ಕಾನೂನು ಕ್ರಮ ಜರುಗಿಸಲು ಆದೇಶಿಸಿದೆ.
ಪ್ರಸ್ತುತ ವಿವಾದಗ್ರಸ್ತ ಕ್ಯಾಲೆಂಡರ್‌ನಲ್ಲಿ ವಸುಂಧರಾ ದೇವತೆ ಹಾಗೂ ಅವರ ಸಂಪುಟ ಸದಸ್ಯರು ದೇವರ ದರ್ಬಾರಿನ ಸದಸ್ಯರಾಗಿ ಚಿತ್ರಿಸಲಾಗಿತ್ತು. ಇದು ಕೆಲದಿನಗಳ ಕಾಲ ಪ್ರತಿಭಟನೆಗೆ ಕಾರಣವಾಗಿತ್ತು.
|