ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಇನ್ನೊಂದು ಅವಧಿಗೆ ರಾಷ್ಟ್ರಪತಿಯಾಗಲು ಸ್ಪರ್ಧಿಸುವುದಿದ್ದಲ್ಲಿ, ಪಕ್ಷೇತರ ಅಭ್ಯರ್ಥಿ ಭೈರೋನ್ ಸಿಂಗ್ ಶೆಖಾವತ್ ಅವರನ್ನು ಕಣದಿಂದ ಹಿಂದೆ ಸರಿಯುವಂತೆ ಮನವೊಲಿಕೆಗೆ ಪ್ರಯತ್ನಿಸುವುದಾಗಿ ಬಿಜೆಪಿ ಹೇಳಿದೆ.
ಹಾಲಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್ ಅವರು ನಾಳೆ ನಾಪತ್ರ ಸಲ್ಲಿಸುವ ಸಿದ್ಧತೆಯಲ್ಲಿದ್ದು, ಬಿಜೆಪಿ ನೇತೃತ್ವದ ಎಂಡಿಎ ಒಕ್ಕೂಟ ಅವರನ್ನು ಬೆಂಬಲಿಸುವುದಾಗಿ ಹಾಗೂ ಕಾಂಗ್ರೆಸ್ ಎಡರಂಗ ಒಕ್ಕೂಟವಾದ ಯುಪಿಎಗೆ ಪ್ರಬಲ ಸ್ಪರ್ಧೆ ನೀಡುವುದಾಗಿ ಈ ಮೊದಲು ತಿಳಿಸಲಾಗಿತ್ತು.
ಆದರೆ ಇದೀಗ ತೃತೀಯ ರಂಗ ಡಾ. ಕಲಾಂ ಅವರನ್ನು ಬೆಂಬಲಿಸಲು ನಿರ್ಧರಿಸಿ ಮಾತುಕತೆ ಮುಂದುವರಿಸಿರುವುದು, 'ಪಕ್ಷಗಳಲ್ಲಿ ಒಮ್ಮತವಿದ್ದರೆ' ಸ್ಪರ್ಧಿಸುವುದಾಗಿ ಕಲಾಂ ಹೇಳಿರುವುದರಿಂದ ಎನ್‌ಡಿಎ ತನ್ನ ನಿಲುವನ್ನು ಕಲಾಂ ಪರವಾಗಿ ಬದಲಿಸಲು ನಿರ್ಧರಿಸಿದೆ.
ಬಿಜೆಪಯ ಹಿರಿಯ ಮುಖಂಡ ಜಸ್ವಂತ್ ಸಿಂಗ್ ಅವರು ಹೇಳಿಕೆ ನೀಡಿ ಎನ್‌ಡಿಎ ಶೆಖಾವತ್ ಅವರನ್ನು ಬೆಂಬಲಿಸುವುದಾಗಿ ತಿಳಿಸಿತ್ತು, ಆದರೆ ಕಲಾಂ ಸ್ಪರ್ಧಿಸುವುದಾದಲ್ಲಿ ಅವರ ಪುನರಾಯ್ಕೆಗೆ ಪ್ರಯತ್ನಿಸುದಾಗಿ ತಿಳಿಸಿದೆ. ರಾಷ್ಟ್ರಪತಿ (ಕಲಾಂ) ಹಾಗೂ ಉಪರಾಷ್ಟ್ರಪತಿ (ಶೆಖಾವತ್) ಪರಸ್ಪರ ಸ್ಪರ್ಧಿಸಲಾರರು ಎಂಬ ವಿಶ್ಲಾಸ ವ್ಯಕ್ತಪಡಿಸಿದರು.
ಈ ಮುನ್ನ, ತೃತೀಯ ರಂಗದ ಮುಖಂಡರಾದ ಮುಲಾಯಂ ಸಿಂಗ್ ಯಾದವ್, ಚಂದ್ರಬಾಬು ನಾಯ್ಡು, ಹಾಗೂ ವೈಕೋ ಅವರು ಬಿಜೆಪಿಯ ಹಿರಿಯ ನಾಯಕ ಎ ಬಿ ವಾಜಪೇಯಿಯನ್ನು ಭೇಟಿಯಾಗಿ ಈ ಕುರಿತು ಮಾತುಕತೆ ನಡೆಸಿದ್ದರು. ಆ ಬಳಿಕ ಜಸ್ವಂತ್ ಹೇಳಿಕೆ ನೀಡಿರುವುದು ಗಮನಾರ್ಹವಾಗಿದೆ.
|