ಡಾ. ಎಪಿಜೆ ಅಬ್ದುಲ್ ಕಲಾಂ ಅವರನ್ನು ದ್ವಿತೀಯ ಅವಧಿಗೆ ರಾಷ್ಟ್ರಪತಿಯಾಗಿ ಆರಿಸುವ ತೃತೀಯರಂಗ ಯುಎನ್‌ಪಿಎ ನಾಯಕರ ಪ್ರಸ್ತಾಪಕ್ಕೆ ಕಾಂಗ್ರೆಸ್, ಸಿಪಿಐಎಂ ಸಿಪಿಐ ನಿರಾಕರಿಸಿವೆ. ಈ ಮಧ್ಯೆ ಪ್ರತಿಭಾ ಪಾಟೀಲ್ ನಾಮಪತ್ರ ಸಲ್ಲಿಸುವ ಕೊನೆಯ ಸಿದ್ಧತೆ ನಡೆಯುತ್ತಿದೆ.
ತೃತೀಯ ರಂಗದ ನಾಯಕರು ಇಂದು ಬೆಳಗ್ಗೆ ಎಡಪಂಥೀಯ ನಾಯಕರನ್ನು ಭೇಟಿಯಾಗಿ ಕಲಾಂ ಅವರನ್ನು ಬೆಂಬಲಿಸುವಂತೆ ಕೋರಿದ್ದರು. ಆದರೆ ಸಂಘಟನೆಯ ನಿರಾಕರಣೆ ನಿಲುವನ್ನು ಪ್ರಧಾನ ಕಾರ್ಯದರ್ಶಿ ಪ್ರಕಾಶ ಕಾರಾಟ್ ತಿಳಿಸಿದರು.
ಎಡಪಂಥೀಯ ಸಂಘಟನೆಗಳು ಈಗಾಗಲೇ ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್ ಅವರನ್ನು ಬೆಂಬಲಿಸುವುದಾಗಿ ಘೋಷಿಸಲಾಗಿದೆ. ಈ ನಿರ್ಧಾರದಲ್ಲಿ ಬದಲಾವಣೆ ಇಲ್ಲ ಎಂದವರು ತಿಳಿಸಿದ್ದಾರೆ. ಸಿಪಿಐ ಕೂಡಾ ಇದೇ ನಿಲುವನ್ನು ಪ್ರಕಟಿಸಿದೆ.
ಕಾಂಗ್ರಸ್ ಕೂಡ ಯುಪಿಎ ನಿಲುವಿಗೆ ಬದ್ಧತೆ ಪ್ರಕಟಿಸಿದೆ. ಆದ್ದರಿಂದ ಕಲಾಂ ಪರವಾಗಿ ಬೆಂಬಲ ಯಾಚಿಸಲು ತೃತೀಯ ರಂಗದ ನಾಯಕರು ನಾಯಕಿ ಸೋನಿಯಾ ಗಾಂಧಿಯವ ಭೇಟಿಗೆ ಅವಕಾಶ ನಿರಾಕರಿಸಲಾಗಿದೆ. ಈ ಕುರಿತು ಮಾತನಾಡಲು ಎನೂ ಉಳಿದಿಲ್ಲ ಎಂದವರು ಪ್ರತಿಕ್ರಿಯಿಸಿದ್ದಾರೆ.
ಪ್ರತಿಭಾ ನಾಮಪತ್ರ: ಕಾಂಗ್ರೆಸ್ ಎಡರಂಗಳ ಒಕ್ಕೂಟ ಯುಪಿಎಯ ರಾಷ್ಟ್ರ ಪತಿ ಅಭ್ಯರ್ಥಿ ಪ್ರತಿಭಾ ಪಾಟೀಲ್ ನಾಮಪತ್ರಕ್ಕೆ ರಾಷ್ಟ್ರೀಯ ಲೋಕದಳದ ಮುಖಂಡ ಅಜಿತ್ ಸಿಂಗ್ ಸೂಚಕರಾಗಿ ಸಹಿ ಮಾಡಿದ್ದಾರೆ.
ಕಳೆದ ದಿನ ಬಿಎಸ್‌ಪಿ ನಾಯಕಿ ಮಾಯಾವತಿ ಅವರು ಪ್ರತಿಭಾ ಪಾಟೀಲ್ ಅವರ ನಾಮಪತ್ರವನ್ನು ಬೆಂಬಲಿಸಿ ಸೂಚಕರಾಗಿ ನಾಮಪತ್ರಕ್ಕೆ ಸಹಿ ದಾಖಲಿಸಿದ್ದಾರೆ.
ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಈ ಮೋದಲೇ ನಾಮಪತ್ರಕ್ಕೆ ಸಹಿ ದಾಖಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿಭಾ ಪಾಟೀಲ್ ಪರ ಚಟುವಟಿಕೆ ಪ್ರಗತಿಯಲ್ಲಿದೆ.
|