ಕಾಂಗ್ರೆಸ್ ಎಡರಂಗಗಳ ಜಂಟಿಕೂಟ ಯುಪಿಎ ಅಭ್ಯರ್ಥಿಯಾಗಿರುವ ಪ್ರತಿಭಾ ಪಾಟೀಲ್ ರಾಷ್ಟ್ರಪತಿ ಚುನಾವಣೆಗಾಗಿ ನಾಮಪತ್ರ ಸಲ್ಲಿಸುವ ಉದ್ದೇಶದಿಂದ ತಮ್ಮ ರಾಜಸ್ತಾನ ರಾಜ್ಯಪಾಲ ಹುದ್ದೆಗೆ ನಾಳೆ ರಾಜೀನಾಮೆ ನೀಡಲಿದ್ದಾರೆ.
ಪ್ರತಿಭಾ ಪಾಟೀಲ್ ಅವರು ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಲು ನಾಮಪತ್ರ ಸಲ್ಲಿಸುವ ಎಲ್ಲಾ ವಿಧಿವಿಧಾನಗಳೂ ಪೂರ್ಣಗೊಂಡಿದೆ, ಇದಕ್ಕೆ ವೇದಿಕೆ ಎಂಬಂತೆ ಪ್ರಸ್ತುತ ರಾಜೀನಾಮೆ ಕಾರ್ಯ ನಡೆಯುತ್ತಿದೆ.
ತನ್ಮಧ್ಯೆ ಅಧಿಕೃತ ಮಾಹಿತಿಗಳ ಪ್ರಕಾರ ಪ್ರತಿಭಾ ಅವರು ರಾಜಸ್ತಾನ ರಾಜ್ಯಪಾಲ ಹುದ್ದೆಗೆ ತಮ್ಮ ರಾಜೀನಾಮೆ ಪತ್ರವನ್ನು ನಾಳೆ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರಿಗೆ ಸಲ್ಲಿಸುವರು ಎಂಬ ಮಾಹಿತಿ ಇದೆ.
ಲಭ್ಯ ಮಾಹಿತಿಯಂತೆ ಅವರು ಜೂನ್ 23ರಂದು ನಾಮಪತ್ರ ಸಲ್ಲಿಸುವರು ಎಂಬ ಮಾಹಿತಿ ಇದೆ. ನಾಮಪತ್ರ ಸಲ್ಲಿಸುವುದು ಖಚಿತವಾಗುತ್ತಿದ್ದಂತೆಯೇ ರಾಜೀನಾಮೆ ನೀಡುವರು, ಮೊದಲ ಹುದ್ದೆ ತ್ಯಜಿಸದೇ ರಾಷ್ಟ್ರಪತಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸುವುದಿಲ್ಲ ಎಂಬುದು ಪ್ರತಿಭಾ ಅವರ ಹಟ ಎನ್ನಲಾಗುತ್ತಿದೆ.
ಜುಲೈ 19ರಂದು ಮತದಾನ ನಡೆಯುವ ವರೆಗೆ ಪ್ರತಿಭಾ ಪಾಟೀಲ್ ದೆಹಲಿಯಲ್ಲಿ ನೆಲೆಸುವರು, ಇದಕ್ಕಾಗಿ ಸೌತ್ ಅವೆನ್ಯೂ ರಸ್ತೆಯಲ್ಲಿ ಸಂಸದರ ಭವನದಲ್ಲಿ ಅವಕಾಶ ಕಲ್ಪಿಸಲಾಗಿದೆ.
|