ಪಂಜಾಬ್ ರಾಜ್ಯದ ಪ್ರಮುಖಪಟ್ಟಣ ಅಮೃತಸರ್ದಲ್ಲಿ ಕಾರ್ಯಾಚರಿಸಿದ ಮಾದಕದ್ರವ್ಯ ನಿಯಂತ್ರಣ ದಳದ ಅಧಿಕಾರಿಗಳು ಭಾರೀ ಪ್ರಮಾಣದ ಅಫೀಮು ಸರಕು ಸಹಿತಿ ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಿಂದ 300 ಕೆ.ಜಿ. ಪ್ರಮಾಣದ ಅಕ್ರಮ ಸಾಗಣೆ ಅಫೀಮು ಇರುವ ಮೂಟೆಗಳನ್ನು ಮುಟ್ಟುಗೋಲು ಹಾಕಲಾಗಿದೆ. ಪ್ರಸ್ತುತ ಕಚ್ಚಾ ಅಫೀಮು, ಅಫೀಮು ಮತ್ತದರ ಬೀಜ, ಸಸ್ಯದ ತೊಗಟೆಗಳ ಸಂಗ್ರಹ ವಶವಾದ ವಸ್ತುಗಳಲ್ಲಿ ಸೇರಿವೆ.
ಆರೋಪಿಗಳ ಸಾಗಣೆ ಉದ್ದೇಶ ಖಚಿತವಾಗಿಲ್ಲ ಎಂಬುದಾಗಿ ಮಾದಕ ವಸ್ತು ಸಾಗಣೆ ನಿಯಂತ್ರಣ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
|