ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಟಾಡಾ ಅಸ್ತಿತ್ವ ಪ್ರಶ್ನೆ -ಸಂಜಯ್‌ಗೆ ನಿರೀಕ್ಷೆ
webdunia
ಮುಂಬೈ ಸರಣಿ ಸ್ಫೋಟ(1993) ಕುರಿತಂತೆ ವಿಚಾರಣೆ ನಡೆಸುತ್ತಿರುವ ವಿಶೇಷ ಟಾಡಾ ನ್ಯಾಯಾಲಯವು ಇಂದು ಮತ್ತೆ ಕಲಾಪನಡೆಸುತ್ತಿದ್ದು, ಬಾಲಿವುಡ್ ನಟ ಸಂಜಯ್ ದತ್ ಸೇರಿದಂತೆ ಹಲವರ ಕುರಿತಂತೆ ಹೊಸ ನಿರೀಕ್ಷೆ ಇರಿಸಿದೆ.

ಟಾಡಾ ಕಾಯ್ದೆ ಅಸ್ತಿತ್ವ ಕಳೆದು ಕೊಂಡಿರುವುದರಿಂದಾಗಿ ಅದರನ್ವಯ ಬಂಧನಕ್ಕೊಳಗಾದ ಆರೋಪಿಗಳನ್ನು ಟಾಡಾ ನ್ಯಾಯಾಲಯದಲ್ಲಿ ಶಿಕ್ಷಿಸುವುದು ಅಸಂವಿಧಾನಿಕ ಎಂಬ ಅರ್ಜಿಯಂತೆ ಕಳೆದ ಮಂಗಳವಾರ ಟಾಡಾ ನ್ಯಾಯಾಲಯ ಮುಂದೂಡಲಾಗಿತ್ತು.

ಇಂದು ಕಲಾಪ ಮುಂದುವರಿಸಲಿರುವ ಟಾಡಾ ನ್ಯಾಯಾಲಯವು ಮುಂದಿನ ಪ್ರಕರಣಗಳನ್ನು ಮುಂಬೈ ಉಚ್ಚ ನ್ಯಾಯಾಲಯ ಅಥವಾ ಸರ್ವೋಚ್ಛ ನ್ಯಾಯಾಲಯಕ್ಕೆ ಹಸ್ತಾಂತರಿಸಬೇಕೆ ಎಂಬ ಕುರಿತು ನಿರ್ಣಯಕ್ಕಾಗಿ ಚರ್ಚಿಸುವ ಸಾಧ್ಯತೆ ಇದೆ.

ಕಳೆದ ಮಂಗಳವಾರದ ಬಳಿಕ ಒಂದು ವಾರಕ್ಕೂ ಅಧಿಕ ಕಾಲ ಮುಂದೂಡಲಾಗಿರುವ ಕಲಾಪ, ಅಂದು 16 ಮಂದಿಗೆ ಶಿಕ್ಷೆ ವಿಧಿಸಿತ್ತು, ಸಂಜಯ್ ದತ್ ತೀರ್ಪನ್ನು ಇಂದಿಗೆ ವಿಸ್ತರಿಸಲಾಗಿತ್ತು.

ಟಾಡಾ ನ್ಯಾಯಾಲಯದಲ್ಲಿ ವಿಚಾರಣೆಗಿದ್ದ 100 ಮಂದಿಯಲ್ಲಿ 76 ಮಂದಿಗೆ ಶಿಕ್ಷೆ ವಿಧಿಸಲಾಗಿದೆ. ಇನ್ನು ಸಂಜಯ್ ದತ್ ಸೇರಿದಂತೆ 24 ಮಂದಿ ಶಿಕ್ಷೆ ಬಾಕಿ ಉಳಿದಿದೆ.
ಮತ್ತಷ್ಟು
ಭಾರೀ ಪ್ರಮಾಣದ ಕಚ್ಛಾಅಫೀಮು ವಶ
ಪ್ರತಿಭಾ ಪಾಟೀಲ್ ನಾಳೆ ನಾಜೀನಾಮೆ
ಕಲಾಂಗೆ ನಕಾರ, ಪ್ರತಿಭಾ ಮುನ್ನಡೆ
ಕಲಾಂ ಮರು ಆಯ್ಕೆಗೆ ಬಿಜೆಪಿ ಸಿದ್ಧತೆ
ತಾಜ್‌ ಗೆ ಮತ ನೀಡಿ- ಆಂದೋಲನ
ವಸುಂಧರಾ ದೇವರೆಂದವರ ವಿರುದ್ಧ ಪ್ರಕರಣ