ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಕುರಿತಂತೆ ವಿಶೇಷ ಟಾಡಾ ನ್ಯಾಯಾಲಯದಿಂದ ಶಿಕ್ಷೆಗೆ ತೀರ್ಪಾಗಿರುವ 16 ಮಂದಿ ಆರೋಪಿಗಳು ಇದೀಗ ಟಾಡಾ ಕಾಯ್ದೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ವಾದಗತಿ ಪ್ರಬಲವಾಗುತ್ತಿದೆ.
ಉಗ್ರಗಾಮಿ ಚಟುವಟಿಕೆಗಳನ್ನು ಹತ್ತಿಕ್ಕಲು ಜಾರಿಗೊಳಿಸಲಾಗಿರುವ 'ಉಗ್ರಗಾಮಿ ಹಾಗೂ ವಿಧ್ವಂಸಕ ಕೃತ್ಯ ನಿಯಂತ್ರಣ ಕಾಯ್ದೆ' (ಟಾಡಾ) ಇದೀಗ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ, ಸರ್ವೋಚ್ಛ ನ್ಯಾಯಾಲಯವೂ ಈ ಕುರಿತು ಆದೇಶಿದೆ ಎಂಬುದಾಗಿ ಆರೋಪಿಗಳ ಪರವಾಗಿ ವಾದಮಂಡಿಸಲಾಗಿದೆ.
ಟಾಡಾ ಸಿಂಧುತ್ವ ಪ್ರಶ್ನನಿಸಿರುವುದರಿಂದ ಅದು ಟಾಡಾ ನ್ಯಾಯಾಲಯ ಮತ್ತದರ ತೀರ್ಪನ್ನೂ ಪ್ರಶ್ನಿಸಿದಂತಾಗಿದೆ. ಆರೋಪಿಗಳ ಪರವಾಗಿ ವಾದಿಸುತ್ತಿರುವ ಹರ್ಷಾದ್ ಪೋಂಡಾ, ಟಾಡಾ ಕಾಯ್ದೆ ಅಳವಡಸುವಲ್ಲಿನ ಸುಪ್ರೀಂ ಕೋರ್ಟ್ ಆದೇಶ ಈ ಸಂಬಂಧಿತ ಟಾಡಾ ನ್ಯಾಯಾಲಯಕ್ಕೂ ಅನ್ವಯ ಎಂದವರು ವಾದಿಸಿದ್ದಾರೆ.
ಸುಪ್ರೀಂ ಕೋರ್ಟ್ಗೆ ಮೊರೆ ಹೋಗುವುದು ಹಾಗೂ ನ್ಯಾಯಕ್ಕಾಗಿ ಆಗ್ರಹಿಸುವುದಲ್ಲದೆ ಬೇರೆ ದಾರಿ ಇವರಿಗೆ ಉಳಿದಿಲ್ಲ ಎಂದವರು ವಾದಿಸಿದ್ದಾರೆ,
|