ಟಾಡಾ ಪ್ರಕರಣಗಳನ್ನು ವಿಚಾರಣೆ ನಡೆಸುತ್ತಿರುವ ಇಲ್ಲಿನ ನ್ಯಾಯಾಲಯವು 1993ರಲ್ಲಿ ಸಂಭವಿಸಿದ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್‌ಎಸ್‌ಎಸ್) ಕಚೇರಿ ಧ್ವಂಸ ಪ್ರಕರಣದ 11 ಮಂದಿಗೆ ಶಿಕ್ಷೆ ವಿಧಿಸಿದೆ ತೀರ್ಪಿತ್ತಿದೆ.
ನಿಷೇಧಿತ ಅಲ್-ಉಮ್ಮಾ ಉಗ್ರಗಾಮಿ ಸಂಘಟನೆ ಸದಸ್ಯನಾಗಿದ್ದ ಎಸ್.ಎ. ಪಾಷಾ ಸಹಿತ ನಾಲ್ಕು ಮಂದಿಯನ್ನು ದೋಷ ಮುಕ್ತ ಗೊಳಿಸಲಾಗಿದೆ. ಪ್ರಕರಣದಲ್ಲಿ ಆರ್ಎಸ್ ಎಸ್ ಕಚೇರಿ ಧ್ವಂಸವಾಗಿತ್ತು.
ಪ್ರಸ್ತುತ ಬಾಂಬ್ ಸ್ಫೋಟ ಪ್ರಕರಣದಲ್ಲಿ 11 ಮಂದಿ ಸಾವಿಗೀಡಾಗಿದ್ದರು. ನ್ಯಾಧೀಶ ಟಿ. ರಾಮಸ್ವಾಮಿ ಅವರು ಪ್ರಸ್ತುತ ತೀರ್ಪು ನೀಡಿದ್ದು, 11 ಮಂದಿ ಆರೋಪಿಗಳ ಮೇಲಿನ ದೋಷಾರೋಪಣೆ ಸಾಬೀತಾಗಿರುವುದರಿಂದ ಶಿಕ್ಷೆ ವಿಧಿಸಲಾಗಿದೆ ಎಂದಿದ್ದಾರೆ.
ಆರೋಪಿಗಳಾದ ಅಬೂಬಕರ್ ಸಿದ್ದಿಕ್,ಹೈದರ್ ಆಲಿ, ಖಾಜಾ ನಿಜಾಮುದ್ದೀನ್ ಮುಂತಾದ ಪ್ರಮುಖ ಆರೋಪಿಗಳ ಮೇಲಿನ ದೋಷಾರೋಪಣೆ ಸಾಬೀತಾಗಿದೆ. ಈ ಮಧ್ಯೆ ನಾಲ್ಕು ಮಂದಿಯನ್ನು ದೋಷಮುಕ್ತಗೊಳಿಸಲಾಗಿದೆ.
|