ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಸೋನಿಯಾ ಗಾಂಧಿ ಕಾಂಗ್ರೆಸಿಗರಿಗೆ 'ದುರ್ಗೆ!'
webdunia
ಬಿಜೆಪಿ ಮುಖಂಡರು ವಸುಂಧರಾ ರಾಜೆಯನ್ನು ದೇವತೆಯಾಗಿ ಚಿತ್ರಿಸಿ ಕ್ಯಾಲೆಂಡರ್ ಪ್ರಕಟಿಸಿದ ಕುರಿತು ಮೊಕದ್ದಮೆ ಎದುರಿಸುತ್ತಿರುವಂತೆಯೇ, ಇತ್ತ ಉತ್ತರ ಪ್ರದೇಶದ ಕಾಂಗ್ರೆಸ್ ಕಾರ್ಯಕರ್ತರು ರಾಷ್ಟ್ರೀಯ ನಾಯಕಿ ಸೋನಿಯಾರನ್ನು ದುರ್ಗಾದೇವಿಗೆ ಹೋಲಿಸಿದ್ದಾರೆ.

ಉತ್ತರ ಪ್ರದೇಶದ ಮೊರದಾಬಾದ್‌ನ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ಕಚೇರಿಯಲ್ಲಿ ಸೋನಿಯಾ ಮುಖ ಹಾಗೂ ದುರ್ಗಾದೇವತೆಯ ದೇಹ ಹೊಂದಿದ ಭಾವಚಿತ್ರವನ್ನು ಗೋಡೆ ತಗುಲಿಸಿ ಪೂಜಿಸುತ್ತಿದ್ದಾರೆ.

ಭಿತ್ತಿಚಿತ್ರದಲ್ಲಿ, ದುರ್ಗೆಯಂತೆ ಸೋನಿಯಾ ಅವರಿಗೂ ಹಲವು ಕೈಗಳಿದ್ದು ಅದರಲ್ಲಿ ಪಕ್ಷದ ವಿವಿಧ ಸಂಘಟನಾ ಕಾರ್ಯಗಳನ್ನು ವಹಿಸಲಾಗಿದೆ. ಅವರು ಸಿಂಹದ ಮೇಲೆ ಕುಳಿತಿದ್ದು, ಸಿಂಹವು ರಾಜಕೀಯ ಅಧಿಕಾರದ ಪ್ರತೀಕವಾಗಿ ಚಿತ್ರಣಗೊಂಡಿದೆ.

ಉತ್ತರ ಪ್ರದೇಶ ಚುನಾವಣೆ ನಿಮಿತ್ತ ಈ ಕ್ಯಾಲೆಂಡರ್‌ಭಾವಚಿತ್ರಗಳನ್ನು ತಯಾರಿಸಿದ್ದು, ಇದರ ತಯಾರಕನು ಮಾದರಿ ಚಿತ್ರವೊಂದನ್ನು ಪಕ್ಷ ಕಚೇರಿಯಲ್ಲಿ ತೂಗಿಸಿದ್ದಾನೆ. ಇದರಲ್ಲೇನೂ ವಿವಾದವಿಲ್ಲ, ಇದು ಒಂದು ಕಾಲರೂಪ ಅಷ್ಟೇ ಎಂದು ಸ್ಥಳೀಯ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎ.ಎಸ್. ಸೋನಿ ನಿರ್ಭಾವುಕತೆಯಿಂದ ಪ್ರತಿಕ್ರಿಯಿಸಿದ್ದಾರೆ.

ಈ ಭಾವಚಿತ್ರದ ಕುರಿತು ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ, ನ್ಯಾಯಾಲಯ, ಕಾನೂನುಕಟ್ಟಳೆ ಇದೆಯೇ ಎಂದು ಕಾದುನೋಡಬೇಕಷ್ಟೇ. ರಾಜಸ್ತಾನದ ಮುಖ್ಯಮಂತ್ರಿ ವಸುಂಧರಾ ರಾಜೆಯವರನ್ನು ದೇವರಾಗಿ ಚಿತ್ರಿಸಿದ ಶಾಸಕರಂತೂ ಮೊಕದ್ದಮೆ ಎದುರಿಸುತ್ತಿದ್ದಾರೆ.
ಮತ್ತಷ್ಟು
ಆರ್ಎಸ್ಸೆಸ್‌ ಕಚೇರಿ ಸ್ಫೋಟ-11 ಮಂದಿಗೆ ಶಿಕ್ಷೆ
ಪ್ರತಿಭಾ ಪಾಟೀಲ್ ರಾಜೀನಾಮೆ
ಹಿ.ಪ್ರ.-ಬಸ್‌ದುರಂತಕ್ಕೆ11 ಬಲಿ
ಸ್ಫೋಟ ಅರೋಪಿಗಳಿಂದ ಟಾಟಾ ಅಸ್ತಿತ್ವ ಪ್ರಶ್ನೆ
ಟಾಡಾ ಅಸ್ತಿತ್ವ ಪ್ರಶ್ನೆ -ಸಂಜಯ್‌ಗೆ ನಿರೀಕ್ಷೆ
ಭಾರೀ ಪ್ರಮಾಣದ ಕಚ್ಛಾಅಫೀಮು ವಶ