ಸೇನಾರಂಗದಲ್ಲಿ ಭಾರತ ಜಾಗತಿಕವಾಗಿ ಮುಂಚೂಣಿಗೆ ತಲುಪಬೇಕೆಂದರೆ ಶಬ್ದಾತೀತ ಕ್ಷಿಪಣಿಯಾದ ಬ್ರಹ್ಮೋಸ್‌ಗಿಂತ ಶಕ್ತಿಯುತವಾದ 'ಅತಿಶಬ್ದಾತೀತ' (ಹೈಪರ್ ಸೋನಿಕ್) ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸಬೇಕೆಂದು ರಾಷ್ಟ್ರಪತಿ ಡಾ.ಎ ಪಿ ಜೆ ಅಬ್ದುಲ್ ಕಲಾಂ ಸರ್ಕಾರಕ್ಕೆ ಸಲಹೆ ನೀಡಿದರು.
ಭಾರತ- ರಷ್ಯಾ ಜಂಟಿ ವಲಯದ ಸಂಶೋಧನೆಯಾದ ಮಹತ್ವಾಕಾಂಕ್ಷೆಯ ಶಬ್ದಾತೀತ (ಸೂಪರ್‌ಸೋನಿಕ್)ಕ್ಷಿಪಣಿ ಬ್ರಹ್ಮೋಸ್ ಕ್ಷಿಪಣಿಯನ್ನು ಸೇನೆಗೆ ಸಮರ್ಪಿಸಿ ಭಾರತೀಯ ಸೇನಾಬಲದ ಸರ್ವೋಚ್ಛ ದಂಡನಾಯಕರೂ ಆಗಿರುವ ಮಾತನಾಡುತ್ತಿದ್ದರು.
ಕ್ಷಿಪಣಿ ತಜ್ಞ ವಿಜ್ಞಾನಿಯೂ ಆಗಿರುವ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು , ಬ್ರಹ್ಮೋಸ್ ವಾಯುನೆಲೆಯು ಮಾರ್ಕ್-2 ವಲಯದಲ್ಲಿ ಕಾರ್ಯಾಚರಿಸುವ ಸಮಯ ಬಂದಿದೆ ಎಂದರಲ್ಲದೆ, ಇದು ಅತಿ ಶಬ್ದಾತೀತ ಕ್ಷಿಪಣಿಗಳ ಮಾರುಕಟ್ಟೆಯಲ್ಲಿ ಮುಂಚೂಣಿಗೆ ತರಲಿದೆ ಎಂದು ಅಭಿಪ್ರಾಯಪಟ್ಟರು.
ಮರುಬಳಕೆಯ ಕ್ಷಿಪಣಿ ತಯಾರಿಸಿದರೆ ಆರ್ಥಿಕವಾಗಿಯೂ ಲಾಭದಾಯಕ, ಮಾರುಕಟ್ಟೆಯ ಸ್ವಾಧೀನವೂ ಹೆಚ್ಚಿತ್ತದೆ ಎಂದು ರಾಷ್ಟ್ರಪತಿ ಅಬ್ದುಲ್ ಕಲಾಂ ಸೇನಾಧಿಕಾರಿಗಳಿಗೆ ಸಲಹೆ ಇತ್ತರು.
ಬ್ರಹ್ಮೋಸ್ ಅತಿ ವೇಗದ ಚಲನೆಯ ಕ್ಷಿಪಣಿಯ ಲಭ್ಯತೆಯೊಂದಿಗೆ ಭಾರತವು ಭೂತಲದಿಂದ ಭೂತಲಕ್ಕೆ ಹಾರಿಬಿಡುವ ಕ್ಷಿಪಣಿ ,ಸಾಮರ್ಥ್ಯ ಹೊಂದಿದಂತಾಗಿದೆ. ಬ್ರಹ್ಮೋಸ್ನಲ್ಲಿ ಅತಿಶಬ್ದಾತೀತ ವೇಗದ ಚಲನೆಗಾಗಿ ಸ್ಕ್ರಾಮ್‌ಜೆಟ್ ತಂತ್ರಜ್ಞಾನ ಬಳಸಲಾಗಿದೆ.ಕಾರ್ಯಕ್ರಮದಲ್ಲಿ ಸೇನಾ ಮುಖ್ಯಸ್ಥ ಜ.ಜೆಜೆ ಸಿಂಗ್ ಮತ್ತಿತರರು ಪಾಲ್ಗೊಂಡಿದ್ದರು.
|