ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ತೃ-ರಂಗ ಹೊಸ ಅಸ್ತ್ರ:ಇಂದು ಕಲಾಂ ಭೇಟಿ
ತನ್ನ ಗೆಲುವು ಖಚಿತವೆಂದಾದರೆ ಮಾತ್ರ ಸ್ಪರ್ಧಿಸುವೆ ಎಂದು ಡಾ.ಎಪಿಜೆ ಅಬ್ದುಲ್ ಕಲಾಂ ಉತ್ತರ, ಕಾಂಗ್ರೆಸ್ ಎಡರಂಗಗಳ ಬೆಂಬಲ ನಿರಾಕರಣೆ ಇತ್ಯಾದಿಗಳ ನಡುವೆಯೂ ತೃತೀಯ ರಂಗ ಮುಖಂಡರು ಇಂದು ಸಂಜೆ ಎರಡನೇ ಬಾರಿ ಕಲಾಂ ಭೇಟಿಯಾಗುತ್ತಿದ್ದಾರೆ.

ತೃತೀಯರಂಗ (ಯುಎನ್‌ಪಿಎ) ನಾಯಕರು ಇಂದು ಎಐಎಡಿಎಂಕೆ ನಾಯಕಿ ಜಯಲಲಿತಾ ಅವರನ್ನೂ ಸೇರಿಸಿ ರಾಷ್ಟ್ರಪತಿ ಡಾ. ಕಲಾಂ ಅವರನ್ನು ಭೇಟಿ ಮಾಡಿ ಎರಡನೇ ಅವಧಿಗೆ ಸ್ಪರ್ಧಿಸುವಂತೆ ಮನವೊಲಿಸುವ ಪ್ರಯತ್ನಕ್ಕಿಳಿಯಲಿದ್ದಾರೆ.

ತೃತೀಯ ರಂಗ ಇಂದು ಸಂಜೆ ಕಲಾಂ ಅವರನ್ನು ಭೇಟಿ ಮಾಡುತ್ತಿರುವುದು, ಅವರು ಸ್ಪರ್ಧೆ ಗಿಳಿಯುವಂತೆ ಮಾಡಲು ಯಾವ ಅಸ್ತ್ರ ಬಳಸುತ್ತಿದೆ ಹಾಗೂ ಫಲಿತಾಂಶವೇನು ಎಂಬ ಕುರಿತು ಕಾದು ನೋಡಬೇಕಷ್ಟೇ.

ಈ ಮಧ್ಯೆ ಕಾಂಗ್ರೆಸ್- ಎಡರಂಗ ಮೈತ್ರಿಕೂಟ ಯುಪಿಎಯು ತನ್ ಅಭ್ಯರ್ಥಿ ಪ್ರತಿಭಾ ಪಾಟೀಲ್ ಅವರ ಪರವಾಗಿ ನಾಪತ್ರ ಸಲ್ಲಿಸಲು ಅಂತಿಮ ಸಿದ್ಧತೆ ನಡೆಸಿದೆ. ಕಲಾಂ ಅವರ ಸ್ಪರ್ಧೆಗೆ ಬೆಂಬ ನಿರಾಕರಿಸಿವೆ.

ಆದರೆ ಬಿಜೆಪಿ ಮೈತ್ರಿಕೂಟ ಎನ್‌ಡಿಎ ಹಾಗೂ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್ ಅವರು ಕಲಾಂ ಸ್ಪರ್ಧಿಸುವುದಿದ್ದಲ್ಲಿ ಬೆಂಬಲಿಸುವ ಭರವಸೆ ನೀಡಿದ್ದಾರೆ.

ಆದಾಗ್ಯೂ ವಿವಿಧ ರಾಜಕೀಯ ಪಕ್ಷಗಳಲ್ಲಿ ಸಹಮತ ಹಾಗೂ ಗೆಲುವು ಖಚಿತ ವಿದ್ದರೆ ಮಾತ್ರ ತಾನು ಇನ್ನೊಂದು ಅವಧಿಗೆ ಸ್ಪರ್ಧಿಸುವುದಾಗಿ ಕಲಾಂ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಬಹುಮತ ಇನ್ನೂ ಕಾಂಗ್ರೆಸ್ ನೇತೃತ್ವದ ಯುಪಿಎ ಅಭ್ಯರ್ಥಿಕ ಕಡೆಗಿದೆ.

ಮತ್ತಷ್ಟು
'ಅತಿಶಬ್ದಾತೀತ'ಮರುಬಳಕೆ ಕ್ಷಿಪಣಿ-ಕಲಾಂ ಸಲಹೆ
ಸೋನಿಯಾ ಗಾಂಧಿ ಕಾಂಗ್ರೆಸಿಗರಿಗೆ 'ದುರ್ಗೆ!'
ಆರ್ಎಸ್ಸೆಸ್‌ ಕಚೇರಿ ಸ್ಫೋಟ-11 ಮಂದಿಗೆ ಶಿಕ್ಷೆ
ಪ್ರತಿಭಾ ಪಾಟೀಲ್ ರಾಜೀನಾಮೆ
ಹಿ.ಪ್ರ.-ಬಸ್‌ದುರಂತಕ್ಕೆ11 ಬಲಿ
ಸ್ಫೋಟ ಅರೋಪಿಗಳಿಂದ ಟಾಟಾ ಅಸ್ತಿತ್ವ ಪ್ರಶ್ನೆ