ಸಂಭಾವ್ಯ ರಾಷ್ಟ್ರಪತಿ ಚುನಾವಣೆಯ ಹಿನ್ನೆಲೆಯಲ್ಲಿ ಪ್ರಸಕ್ತ ಸರ್ವಸಮ್ಮತ ಅಭ್ಯರ್ಥಿಯನ್ನು ಆರಿಸುವ ಬದಲು ರಾಷ್ಟ್ರಪತಿ ಭವನದಲ್ಲಿ ನಡೆಯುತ್ತಿರುವ ಚಟುವಟಿಕೆಗಳು 'ದುರದೃಷ್ಟಕರ' ಎಂದು ಕೇಂದ್ರ ಸಚಿವರಾದ ರಾಮ್‌ವಿಲಾಸ್ ಪಾಸ್ವಾನ್ ಹಾಗೂ ಪ್ರಿಯರಂಜನ್ ದಾಸ್ ಮುನ್ಷಿ ಅಭಿಪ್ರಾಯಪಟ್ಟಿದ್ದಾರೆ.
ಯುಪಿಎ ಒಕ್ಕೂಟವು ಪ್ರತಿಭಾ ಪಾಟೀಲ್ ಅವರನ್ನು ರಾಷ್ಟ್ರಪತಿ ಸ್ಥಾನಕ್ಕಾಗಿ ಬೆಂಬಲಿಸುತ್ತಿದೆ. ವಿರೋಧ ಪಕ್ಷಗಳೂ ಈ ವಿಷಯದಲ್ಲಿ ಸಹಮತ ಹೊಂದಬೇಕಿದೆ. ಇದರ ಬದಲು ದ್ವಿತೀಯ ಅವಧಿಗಾಗಿ ಡಾ. ಕಲಾಂ ಅವರ ಮನವೊಲಿಸಲು ಪ್ರಯತ್ನಿಸುವುದು ಸರಿಯಲ್ಲ ಎಂದವರು ತಿಳಿಸಿದ್ದಾರೆ.
ಇನ್ನೂ ಕಾಲ ಮಿಂಚಿಲ ತೃತೀಯ ರಂಗಗಳು ಹಾಗೂ ವಿರೋಧ ಪಕ್ಷ ಸಂಘಟನೆಗಳು ಪ್ರತಿಭಾ ಪಾಟ್ ಅವರಿಗೆ ಬೆಂಬಲ ವ್ಯಕ್ತಪಡಿಸಬೇಕೆಂದು ಅವರು ವಿನಂತಿಸಿದ್ದಾರೆ.
ರಾಷ್ಟ್ರಪತಿ ಚುನಾವಣೆಗಾಗಿ ಯಾವ ಅಭ್ಯರ್ಥಿಯನ್ನು ಬೆಂಬಲಿಸಲು ಕೂಡ ವಿರೋಧ ಪಕ್ಷಗಳಿಗೆ ಹಕ್ಕು ಇದೆ. ಆದರೆ ಓರ್ವ ಮಹಿಳಾ ಅಭ್ಯರ್ಥಿ ಎಂಬ ನೆಲೆಯಲ್ಲಿ ಪ್ರತಿಭಾ ಪಾಟೀಲ್ ಅವರನ್ನು ಬೆಂಬಲಿಸಬೇಕಿದೆ. ಸರ್ವಸಮ್ಮತ ಅಭ್ಯರ್ಥಿಯಾಗಿ ಅವರನ್ನು ಆರಿಸಲು ಇನ್ನೂ ಕಾಲ ಮಿಂಚಿಲ್ಲ ಎಂದು ಸಂಸದೀಯ ವ್ಯವಹಾರ ಸಚಿವ ಪ್ರಿಯರಂಜನ್ ದಾಸ್ ಮುನ್ಷಿ ಹಾಗೂ ರಾಸಚನಿಕ ಗೊಬ್ಬರಖಾತೆ ಸಚಿವ ಪಾಸ್ವಾನ್ ಅಭಿಪ್ರಾಯಪಟ್ಟಿದ್ದಾರೆ.
ನಾಮಪತ್ರ: ತನ್ಮಧ್ಯೆ, ಯುಪಿಎ ಒಕ್ಕೂಟದ ರಾಷ್ಟ್ರಪತಿ ಅಭ್ಯರ್ಥಿ ಪ್ರತಿಭಾ ಪಾಟೀಲ್ ಅವರ ಅಭ್ಯರ್ಥಿತನವನ್ನು ಬೆಂಬಲಿಸಿ ನಾಮಪತ್ರಕ್ಕೆ ಪಾಸ್ವಾನ್ ಹಾಗೂ ಮುನ್ಷಿ ಸಹಿ ದಾಖಲಿಸಿದರು.
|