ಕಾಂಗ್ರೆಸ್ ಹಾಗೂ ಎಡರಂಗಗಳ ಒಕ್ಕೂಟ ಬೆಂಬಲಿತ ಅಭ್ಯರ್ಥಿ ಪ್ರತಿಭಾ ಪಾಟೀಲ್‌ರ ಮೇಲೆ ಇನ್ನೊಂದು ಅಸ್ತ್ರರ ಪ್ರಯೋಗಿಸಲಾಗಿದ್ದು, ತಮ್ಮ ಸಹೋದರನನ್ನು ಕೊಲೆ ಕೃತ್ಯದಿಂದ ಮಾರುಮಾಡಲೆತ್ನಿಸಿದ ಆರೋಪ ಬಹಿರಂಗವಾಗಿದೆ.
ಪ್ರಸ್ತುತ ಪ್ರಕರಣ 2005ರಲ್ಲಿ ಸಂಭವಿಸಿದ್ದು, ಪ್ರೊ.ವಿ.ಜಿ. ಪಟೇಲ್ ಎಂಬವರ ಹತ್ಯೆಗೆ ಪ್ರತಿಭಾ ಸೋದರ ಕಾರಣ ಎಂದು ಆರೋಪಿಸಿ ಮೃತನ ಪತ್ನಿ ಪ್ರೊ. ರಜನಿ ಪಟೇಲ್ ಇಂದು ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಸಿಬಿಐ ತನಿಖೆಗೆ ವಿನಂತಿಸಿದ್ದಾರೆ.
ರಾಷ್ಟ್ರಪತಿ ಪದಾಕಾಂಕ್ಷಿ ಪ್ರತಿಭಾ ಪಾಟೀಲ್ ಅವರ ಸೋದರ ಹಾಗೂ ರಾರಕಾರಣಿ ಜಿ. ಎನ್. ಪಟೇಲ್ ಅವರು ಪ್ರೊ. ಪಟೇಲ್ ಹತ್ಯಾ ಪ್ರಕರಣದಲ್ಲಿ ಆರೋಪಿ ಎಂದು ದೂರಲಾಗಿದೆ.
ಜಿ ಎನ್ ಪಾಟೀಲ್ ಹಾಗೂ ಮೃತ ವಿ.ಜಿ. ಪಟೇಲ್ ಅವರು ಪರಸ್ಪರ ರಾಜಕೀಯ ಶತ್ರುಗಳಾಗಿದ್ದು, 2005ರಲ್ಲಿ ಮುಂಬೈ -ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರೊ. ವಿ.ಜಿ. ಪಾಟೀಲ್ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪ್ರತಿಭಾರ ಸೋದರ ಜಿ. ಎನ್. ಪಟೇಲ್ ಇದರ ರೂವಾರಿ ಎಂದು ಆರೋಪಿಸಲಾಗಿತ್ತು.
ಪ್ರೊ. ರಜನಿ ಹೇಳುವಂತೆ ಆರೋಪಿ ಜಿ ಎನ್ ಪಾಟೀಲ್ ರಾಜ್ಯಪಾಲೆ ಹಾಗೂ ಹಾಲಿ ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್ ಪಕ್ಷದ ಧುರೀಣರ ಪ್ರಭಾವದಿಂದ ಪಾರಾಗಿದ್ದಾರೆ. ಸ್ಥಳೀಯ ಪೊಲೀಸರು ನಿರ್ಲಕ್ಷ್ಯ ತಾಳಿದ್ದಾರೆ ಎಂದಿದ್ದಾರೆ.
ಮುಂಬೈ ನ್ಯಾಯಾಲಯವು ಜಿ.ಎನ್. ಪಾಟೀಲರನ್ನು ಮಂಪರು ಪರೀಕ್ಷೆಗೆ ಗುರಿಪಡಿಸಲು ಈಗಾಗಲೇ ಆದೇಶಿಸಿದ್ದರೂ ಪೊಲೀಸರು ರಾಜಕೀಯ ವರ್ಚಸ್ಸಿಗೆ ಹೆದರಿ ಮೊನವಹಿಸಿರುವುದಾಗಿ ದೂರಿದ್ದಾರೆ. ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸಲಾಗುತ್ತಿದೆ. ಸಿಬಿಐ ತನಿಖೆ ಆಗಬೇಕು.
ಪ್ರಕರಣದಲ್ಲಿ ರಾಷ್ಟ್ರಪತಿ ಅಭ್ಯರ್ಥಿ ಪ್ರತಿಭಾ ಅವರ ಶಾಮೀಲಾತಿಯೂ ಎಂಬ ಆರೋಪ ಎಷ್ಟು ಸತ್ಯಾಂಶವಿದೆ ಎಂದು ಅರಿತಿಲ್ಲವಾದರೂ ಕಾಂಗ್ರೆಸ್ ಧುರೀಣೆಯಾಗಿದ್ದು, ಹಾಲಿ ರಾಷ್ಟ್ರಪತಿ ಪದಾಕಾಂಕ್ಷಿಯಾಗಿರುವುದರಿಂದ ಈ ಆರೋಪ ಪ್ರಭಾವಬೀರಲಿದೆ.
|