ಹಾಲಿ ರಾಷ್ಟ್ರಪತಿ ಡಾ.ಎಪಿಜೆ ಅಬ್ದುಲ್ ಕಲಾಂ ಅವರನ್ನು ಸ್ಪರ್ಧಿಸುವಂತೆ ಮಾಡುವ ತೃತೀಯರಂಗ ಯುಎನ್‌ಪಿಎ ಪ್ರಯತ್ನ ವಿಫಲವಾಗಿದೆ. ತನ್ಮಧ್ಯೆ,ಕಾಂಗ್ಸೆಸ್ ನೇತೃತ್ವದ ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್ ಇಂದು ನಾಪತ್ರಸಲ್ಲಿಸುವ ನಿರೀಕ್ಷೆ ಇದೆ.
ಪ್ರಚಲಿತ ಪರಿಸ್ಥಿತಿಯಲ್ಲಿ ದ್ವಿತೀಯ ಅವಧಿಗೆ ರಾಷ್ಟ್ರಪತಿಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಡಾ.ಕಲಾಂ, ರಾಜಕೀಯ ಭವನ ಯಾವುದೇ ರಾಜಕೀಯ ಪ್ರಕ್ರಿಯೆಯಲ್ಲಿ ಭಾಗಿಯಾಗುವುದಕ್ಕೆ ಇಚ್ಛಿಸುವುದಿಲ್ಲ ಎಂದಿದ್ದಾರೆ.
ತೃತೀಯರಂಗ ಯುಎನ್‌ಪಿಎಯ ಎರಡನೇ ನಿಯೋಗ ಎಐಎಡಿಎಂಕೆ ನಾಯಕಿ ಜಯಲಲಿತಾ ನೇತೃತ್ವದಲ್ಲಿ ಡಾ.ಕಲಾಂ ಅವರನ್ನು ಶುಕ್ರವಾರದಂದು ಭೇಟಿಯಾಗಿ ರಾಷ್ಟ್ರಪತಿ ಚುನಾವಣಾ ಕಣಕ್ಕಿಳಿಯುವಂತೆ ಮನವೊಲಿಸುವಲ್ಲಿ ವಿಫಲವಾಗಿದೆ.ತೃತೀಯರಂಗವೀಗ ಹೊಸ ಅಭ್ಯರ್ಥಿಯ ನಿರೀಕ್ಷೆಯಲ್ಲಿದೆ.
ನಾಮಪತ್ರ:ತನ್ಮಧ್ಯೆ, ಕಾಂಗ್ರೆಸ್ ಹಾಗೂ ಎಡಪಂಥೀಯ ಪಕ್ಷಗಳ ಒಕ್ಕೂಟ ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್ ಅವರು ಇಂದು ನಾಮಪತ್ರ ಸಲ್ಲಿಸುವ ನಿರೀಕ್ಷೆ ಇದೆ. ಈ ಕುರಿತ ಎಲ್ಲಾ ಪ್ರಕ್ರಿಯೆಗಳೂ ಪೂರ್ಣವಾಗಿವೆ.
|