ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ಏಷ್ಯಾಕ್ರೀಡೆ ಪ್ರದೇಶದಲ್ಲಿ ಸ್ಫೋಟ,4 ಸಾವು
webdunia
ಏಷ್ಯಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪಿಕ್ಸ್ ಕ್ರೀಡಾ ಕೂಟ ಆರಂಭವಾಗಲು ಗಂಟೆಯ ಅಂತರದಲ್ಲಿ ಇಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ನಾಲ್ಕು ಮಂದಿ ಅಸುನೀಗಿ,20 ಮಂದಿ ಗಂಭೀರಗಾಯಗೊಂಡಿದ್ದಾರೆ.

ಪ್ರಸ್ತುತ ಕೃತ್ಯದಲ್ಲಿ ನಿಷೇಧಿತ ಉಗ್ರಗಾಮಿ ಸಂಘಟನೆ ಉಲ್ಫಾ ಕಾರ್ಯಕರ್ತರ ಕೈವಾಡ ಶಂಕಿಸಲಾಗಿದೆ.ಮಸೀದಿಯೊಂದರ ಮುಂಭಾಗದಲ್ಲಿರುವ ವಾಣಿಜ್ಯ ಸಂಕೀರ್ಣದಲ್ಲಿ ಬಾಂಬ್ ಸ್ಫೋಟಿಸಲಾಗಿತ್ತು.

ಏಷ್ಯಾಅಥ್ಲೆಟಿಕ್ಸ್ ಗ್ರಾಂಡ್‌ಪಿಕ್ಸ್ ಆರಂಭಿಸಲು 9 ತಾಸುಗಳ ಅಂತರದಲ್ಲಿ ಈ ಕೃತ್ಯ ನಡೆದಿದೆ.ಕ್ರೀಡಾಕೂಟದಲ್ಲಿ 20 ರಾಷ್ಟ್ರಗಳ 200 ಮಂದಿ ಅಗ್ರಶ್ರೇಯಾಂಕದ ಆಟಗಾರರು ಪಾಲ್ಗೊಳ್ಳುತ್ತಿರುವುದರಿಂದ ಕೃತ್ಯ ಕಳವಳಮೂಡಿಸಿದೆ.

ಮಾಚ್ಕೋವಾ ಪ್ರದೇಶದಲ್ಲಿರುವ ತರಕಾರಿ ಮಾರುಕಟ್ಟೆಗೆ ಹೊಂದಿರುವ ಮಸೀದಿಬಳಿ ನಿಲ್ಲಿಸಲಾಗಿದ್ದ ಬಾಸಿಕಲ್‌ಗೆ ಬಾಂಬ್‌ನ್ನು ಅಳವಡಿಸಿ ಕೃತ್ಯನಡೆಸಲಾಗಿದೆ. ಕೃತ್ಯವು ಬೆಳಗಿನ 7.30 ಗಂಟೆ ಸುಮಾರಿಗೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.


ದುರ್ಘಟನೆಯಲ್ಲಿ ಸಾವಿಗೀಡಾದವರಲ್ಲಿ ಇಬ್ಬರು ಮಕ್ಕಳಾಗಿದ್ದು ತರಕಾರಿ ಮಾರುಕಟ್ಟೆಯಲ್ಲಿದ್ದವರಾಗಿದ್ದಾರೆ.ತೀವ್ರಸ್ವರೂಪದ ಗಾಯಗೊಂಡವರನ್ನು ಮರ್ವಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಮತ್ತಷ್ಟು
ಕಲಾಂ ಸ್ಪರ್ಧೆಯಲ್ಲಿಲ್ಲ- ಪ್ರತಿಭಾ ಇಂದು ನಾಮಪತ್ರ
ಪ್ರತಿಭಾ ಪಾಟೀಲ್ ವಿರುದ್ಧ ಕ್ರಿಮಿನಲ್ ಆರೋಪ!
ರಾಷ್ಟ್ರಪತಿಭವನದ ಚಟುವಟಿಕೆ ದುರದೃಷ್ಟಕರ
ತೃ-ರಂಗ ಹೊಸ ಅಸ್ತ್ರ:ಇಂದು ಕಲಾಂ ಭೇಟಿ
'ಅತಿಶಬ್ದಾತೀತ'ಮರುಬಳಕೆ ಕ್ಷಿಪಣಿ-ಕಲಾಂ ಸಲಹೆ
ಸೋನಿಯಾ ಗಾಂಧಿ ಕಾಂಗ್ರೆಸಿಗರಿಗೆ 'ದುರ್ಗೆ!'