ದೇಶಾದ್ಯಂತ ಈ ವಾರ ಮುಂಗಾರು ಮಳೆ ಪ್ರಬಲಗೊಂಡಿದೆ. ಆದರೆ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸುರಿದ ಮಳೆಯ ಪ್ರಮಾಣ ಕಡಿಮೆ ಎಂಬುದಾಗಿ ಹವಾಮಾನ ಕೇಂದ್ರದ ಮೂಲಗಳು ತಿಳಿಸಿವೆ.
ಜೂನ್ ಆರಂಭದ ದಿನದಿಂದ ಇದುವರೆಗೆ (ಜೂ.1ರಿಂದ 20)ದೇಶಾದ್ಯಾಂತ ಸುರಿದ ಮಳೆದ ಪ್ರಮಾ87.8 ಮಿ.ಮೀಟರ್ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು 89.3 ಮಿಲಿ ಮೀಟರ್ ಆಗಿತ್ತು.
ಇದು ಕಳೆದ ವರ್ಷ ಇದೇ ಅವಧಿಗಿಂತ ಕಡಿಮೆಯಾಗಿದೆ. ಸಾಮಾನ್ಯ ಮಳೆ ಪ್ರಮಾಣಕ್ಕಿಂತ ಇದು ಕಡಿಮೆಯಾಗಿದ್ದು, 2ಶೇಕಡ ಕಡಿಮೆಯಾಗಿದೆ. ಈ ಅವಧಿಯಲ್ಲಿ ದೇಶದ ಸಾಮಾನ್ಯ ಮಳೆಯ ಪ್ರಮಾಣವು 89.3 ಮಿ.ಮೀ.ಆಗಿದೆ.
ಈ ವರ್ಷ ಮಳೆಗಾಲದ ಹಂಗಾಮು ಆರಂಭವಾಗಿರುವ ಜೂನ್ 14ರಿಂದ 20ರ ವರೆಗಿನ ವಾರದ ಅವಧಿಯಲ್ಲಿ ದೇಶಾದ್ಯಂತ ಸುರಿದ ಮಳೆಯ ಒಟ್ಟು ಪ್ರಮಾಣ 51 ಮಿ.ಮೀಟರ್. ಇದು ಸಾಮಾನ್ಯ ಮಳೆ (38.33)ಗಿಂತ 33 ಶೇಕಡ ಅಧಿಕ.
ದೇಶದ ರಾಜ್ಯಗಳನ್ನೆಲ್ಲಾ ಸೇರಿಸಿ ಗುರುತಿಸಿರುವ 36 ಉಪವಿಭಾಗಗಳ 8ರಲ್ಲಿ ಗರಿಷ್ಠ ಮಳೆಯಾಗಿದೆ 23 ವಿಭಾಗಗಳಲ್ಲಿ ಸಾಮಾನ್ಯ ಮಳೆಯಾಗಿದ್ದರೆ, 3 ವಿಭಾಗಗಳಲ್ಲಿ ಮಳೆ ಅಭಾವವಿದೆ. 2 ವಿಭಾಗಗಳಲ್ಲಿ ಮಳೆ ವಿರಳವಾಗಿದೆ ಎಂದು ವರದಿ ತಿಳಿಸಿದೆ.
ಸಾಮಾನ್ಯ ಮಳೆಯಾಗಿರುವ ರಾಜ್ಯಗಳಲ್ಲಿ ಕರ್ನಾಟಕ, ಕೇರಳ, ಗೋವಾ ಮುಂತಾದ ರಾಜ್ಯಗಳು ಸೇರಿದ್ದರೆ,ಗರಿಷ್ಠ ಮಳೆಯಾಗಿರುವ ದಕ್ಷಿಣದ ರಾಜ್ಯಗಳಲ್ಲಿ ತಮಿಳುನಾಡು ಆಂಧ್ರಭಾಗಗಳು ಸೇರಿವೆ. ಗುಜರಾತ್ ನಂತಹ ರಾಜಯಗಳಲ್ಲಿ ವಿರಳ ಮಳೆ, ರಾಜಸ್ಥಾನ್ ಮಳೆಯ ಅಭಾವ ದಾಖಲಾಗಿದೆ.
|