ಮುಖ್ಯ ಪುಟ  ಸುದ್ದಿ ಜಗತ್ತು  ಸುದ್ದಿಗಳು  ರಾಷ್ಟ್ರೀಯ
 
ರಾಷ್ಟ್ರಪಿತನಿಗೆ ವಂದಿಸಿ ನಾಪತ್ರಸಲ್ಲಿಸಿದ ಪ್ರತಿಭಾ
webdunia
ಕಾಂಗ್ರೆಸ್ ಎಡರಂಗ ಒಕ್ಕೂಟ ಯುಪಿಎ ಅಭ್ಯರ್ಥಿ ಪ್ರತಿಭಾ ಪಾಟೀಲ್ ಅವರು ರಾಷ್ಟ್ರಪತಿ ಚುನಾವಣೆಗಾಗಿ ಇಂದು ತಮ್ಮ ನಾಮಪತ್ರ ಸಲ್ಲಿಸಿದರು.

ನಾಮಪತ್ರ ಸಲ್ಲಿಸುವ ಮುನ್ನ ಪ್ರತಿಭಾಪಾಟೀಲ್ ಹಾಗೂ ಅವರ ಕುಟುಂಬ ಪರಿವಾರದವರು ರಾಜ್‌ಘಾಟ್‌ನಲ್ಲಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧಿ ಅವರ ಸಮಾಧಿಗೆ ಪ್ರಾರ್ಥನೆಸಲ್ಲಿಸಿದರು.

ಬಿಜೆಪಿ ಬೆಂಬಲಿತ ಎನ್‌ಡಿಎ , ರಾಷ್ಟ್ರೀಯ ಪ್ರಗತಿಪರ ಐಕ್ಯರಂಗ (ಯುಎನ್‌ಪಿಎ)ತೃತೀಯರಂಗವು ಇನ್ನೂ ಅಭ್ಯರ್ಥಿಗಳ ಕುರಿತಾಗಿ ಅನಿಶ್ಛಿತತೆಯಲ್ಲಿದ್ದಾರೆ.
ರಾಷ್ಟ್ರೀಯ ಪ್ರಗತಿಪರ ಐಕ್ಯರಂಗವು ಅರ್ಹ ಅಭ್ಯರ್ಥಿಗಾಗಿ ಇನ್ನೂ ಹುಡುಕಾಟ ಮುಂದುವರಿಸಿದೆ. ಆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಪಕ್ಷೇತರ ಅಭ್ಯರ್ಥಿ ಉಪರಾಷ್ಟ್ರಪತಿ ಬೈರೋನ್ ಸಿಂಗ್ ಶೆಖಾವತ್ರನ್ನು ಬೆಂಬಲಿಸಲು ನಿರ್ಧರಿಸಿವೆ.

ತನ್ಮಧ್ಯೆ ನಿಗದಿತ ವೇಳಾ ಪಟ್ಟಿಯಂತೆ, ಪ್ರತಿಭಾ ಪಾಟೀಲ್ ಅವರು ಯುಪಿಎ ನಾಯಿ ಸೋನಿಯಾ ಗಾಂಧಿ ಅವರ ಸಂಗಡ ತೆರಳಿ ಚುನಾವಣಾಧಿಕಾರಿಯಾಗಿರುವ ಲೋಕಸಭಾ ಪ್ರಧಾನ ಕಾರ್ಯದರ್ಶಿ ಪಿ ಡಿ ಟಿ ಆಚಾರಿ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಯುಪಿಎ ಮುಖಂಡರಾದ ಲಾಲಾ ಪ್ರಸಾದ್ ಯಾದವ್, ಶರದ್ ಪವಾರ್,ರಾಮ್ ವಿಲಾಸ್ ಪಾಸ್ವಾನ್, ಟಿ ಆರ್ ಬಾಲು,ಹಾಗೂ ರಾಂದಾಸ್ ಅಟವಳೆ ಉಪಸ್ಥಿತರಿದ್ದರು.
ಎಡರಂಗದ ನಾಯಕರಾದ ಸೀತಾರಾಂ ಯೆಚೂರಿ,ಗುರುದಾಸ್ ದಾಸ್‌ಗುಪ್ತ, ಸಚಿವರಾದ ಪ್ರಣಬ್ ಮುಖರ್ಜಿ, ಶಿವರಾಜ್ ಪಾಟೀಲ್,ಅರುಣ್ ಸಿಂಗ್ ,ಎ ಕೆ ಆಂಟನಿ,ಸುಶೀಲ್ ಕುಮಾರ್ ಶಿಂಧೆ,ಪೃಥ್ವಿರಾಜ್ ಚೌಹಾಣ್,ಮಹಾರಾಷ್ಟ್ರ ಮುಖ್ಯಮಂತ್ರಿ ವಿಲಾಸ್‌ ರಾವ್ ದೇಶ್‌ಮುಖ್,ದೆಹಲಿ ಮುಖ್ಯಮಂತ್ರಿ ಶೀಲಾಧೀಕ್ಷಿತ್ , ಪ್ರತಿಭಾ ಅವರ ಪತಿ ದೇವಿಸಿಂಗ್ ಶೆಖಾವತ್ ಪಾಲ್ದೊಂಡಿದ್ದರು.
ಮತ್ತಷ್ಟು
ಮುಂಗಾರು ಪ್ರಬಲ-ಕಳೆದ ವರ್ಷಕ್ಕಿಂತ ದುರ್ಬಲ
ಏಷ್ಯಾಕ್ರೀಡೆ ಪ್ರದೇಶದಲ್ಲಿ ಸ್ಫೋಟ,4 ಸಾವು
ಕಲಾಂ ಸ್ಪರ್ಧೆಯಲ್ಲಿಲ್ಲ- ಪ್ರತಿಭಾ ಇಂದು ನಾಮಪತ್ರ
ಪ್ರತಿಭಾ ಪಾಟೀಲ್ ವಿರುದ್ಧ ಕ್ರಿಮಿನಲ್ ಆರೋಪ!
ರಾಷ್ಟ್ರಪತಿಭವನದ ಚಟುವಟಿಕೆ ದುರದೃಷ್ಟಕರ
ತೃ-ರಂಗ ಹೊಸ ಅಸ್ತ್ರ:ಇಂದು ಕಲಾಂ ಭೇಟಿ